ಬೆಂಗಳೂರು: ದಂಪತಿಗಳು ಮದುವೆಯಾದ ಮೇಲೆ ಮಗು ಪಡೆಯಬೇಕು ಎಂದು ಹಂಬಲಿಸುವುದು ಸಹಜ. ಆದರೆ ಮಹಿಳೆಯರಂತೆ ಪುರುಷರಿಗೂ ಕೂಡ ವಯಸ್ಸಾದ ನಂತರ ಮಗು ಪಡೆಯಲು ಸಾಧ್ಯವಿಲ್ಲ ಎಂಬುದನ್ನು ಪುರುಷರು ಅರಿತಿರಬೇಕು.
ಪುರುಷರು ತಂದೆಯಾಗುವ ವಯಸ್ಸು 25 ರಿಂದ 50 ರ ಒಳಗೆ ಇರಬೇಕು. 50 ವರ್ಷದ ನಂತರ ಅವರು ತಂದೆಯಾಗುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ ಎಂದು ಲೈಂಗಿಕ ತಜ್ಞರು ಹೇಳುತ್ತಾರೆ. ಗಂಡಸರಲ್ಲಿ ವೀರ್ಯಾಣು ಉತ್ಪತ್ತಿ ಮಾಡುವುದರಲ್ಲಿಟೆಸ್ಟಸ್ಟಿರೋನ್ ಎಂಬ ಹಾರ್ಮೋನು ಬಹಳ ಮುಖ್ಯ ಪಾತ್ರವಹಿಸುತ್ತದೆ. ವಯಸ್ಸಾದ ನಂತರ ಮಕ್ಕಳಾಗದ ತೊಂದರೆ ಮಹಿಳೆಯರಲ್ಲಿ ಮಾತ್ರವಲ್ಲ ಪುರುಷರಲ್ಲೂ ಕಾಡುತ್ತದೆ.
ಪುರುಷರಿಗೆ 30-35 ವರ್ಷ ತಂದೆಯಾಗಲು ಒಳ್ಳೆಯ ಸಮಯ. ಯಾಕೆಂದರೆ ಈ ಸಮಯದಲ್ಲಿ ಅವರ ವೀರ್ಯಾಣುಗಳು ಆರೋಗ್ಯಕರವಾಗಿರುತ್ತದೆ. 35 ವರ್ಷದ ನಂತರ ಅವರ ವೀರ್ಯಾಣು ಉತ್ಪತ್ತಿ ಹಾಗೂ ಸಾಮರ್ಥ್ಯ ಕಡಿಮೆಯಾಗುತ್ತದೆ. ಮಹಿಳೆಯರಲ್ಲಿ 25ನೇ ವರ್ಷ ತಾಯಿಯಾಗಲು ಒಳ್ಳೆಯ ಸಮಯ. 40ವರ್ಷ ದಾಟಿದ ಮೇಲೆ ಮಹಿಳೆಯರಲ್ಲಿ ಮೆನೋಪಸ್ಸ್ (ಮುಟ್ಟು ನಿಲ್ಲುವ ಸಮಯ) ಸಮಯ ಶುರುವಾಗುತ್ತದೆ. ಆದ್ದರಿಂದ ಫ್ಯಾಮಿಲಿ ಪ್ಲಾನಿಂಗ್ ಮಾಡುವ ದಂಪತಿಗಳು ಈ ಅಂಶವನ್ನು ಗಮನದಲ್ಲಿಟ್ಟುಕೊಂಡಿರಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ