ಕರ್ನಾಟಕಕ್ಕೆ ಮೂಗು ಹಿಡಿದು ಪಾಠ ಕಲಿಸಿ ಎಂದು ಪತ್ರ ಬರೆದವರು ಯಾರು ಗೊತ್ತಾ…?
ಗುರುವಾರ, 28 ಡಿಸೆಂಬರ್ 2017 (14:20 IST)
ಬೆಳಗಾವಿ: ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಯಾವುದೇ ಕಾರಣಕ್ಕೂ ಒಪ್ಪಿಗೆ ನೀಡಬೇಡಿ ಎಂದು ಬೆಳಗಾವಿ ಜಿಲ್ಲೆಯ ಮರಾಠ ಯುವ ಮಂಚ್ ನಿಂದ ಮಹಾರಾಷ್ಟ್ರ ಮುಖ್ಯಮಂತ್ರಿ ಅವರಿಗೆ ಪತ್ರ ಬರೆಯಲಾಗಿತ್ತು.
ಬೆಳಗಾವಿ ಜಿಲ್ಲೆಯ ಮರಾಠ ಯುವ ಮಂಚ್ ಮುಖಂಡ ಸೂರಜ್ ಕಣಬುರಕರ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಅವರಿಗೆ ‘ಮಹದಾಯಿ ಬಗ್ಗೆ ಯಾವುದೇ ಕಾರಣಕ್ಕೂ ಒಪ್ಪಿಗೆ ಸೂಚಿಸದೆ, ಈ ವಿಚಾರದಲ್ಲಿ ಕರ್ನಾಟಕಕ್ಕೆ ಮೂಗು ಹಿಡಿದು ಪಾಠ ಕಲಿಸಿ. ಗಡಿ ವಿವಾದ ಬಗೆಹರಿಯುವವರೆಗೂ ಈ ವಿವಾದ ಬಗೆಹರಿಸಬೇಡಿ. ವರದಿ ಪ್ರಕಾರ ಕಳಸಾಬಂಡೂರಿ ನಾಲೆ ಮಹಾರಾಷ್ಟ್ರಕ್ಕೆ ಸೇರುತ್ತೆ. ಮೂರು ರಾಜ್ಯಗಳ ಸಭೆ ನಡೆದರೆ ಮಾತ್ರ ಗಡಿ ವಿವಾದ ಬಗೆಹರಿಸಿ. ಈ ಬಗ್ಗೆ ಕರ್ನಾಟಕದ ಮೇಲೆ ಒತ್ತಡ ಹೇರಬೇಕೆಂದು ಪತ್ರ ಬರೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ