ಆದಿ ಜಾಂಬವ ಅಭಿವೃದ್ಧಿ ನಿಗಮ ಬೇಡ ಎಂದವರಾರು ಗೊತ್ತಾ?
ಆದಿ ಜಾಂಬವ ಅಭಿವೃದ್ಧಿ ನಿಗಮವನ್ನು ಆರಂಭ ಮಾಡಲು ವಿರೋಧ ವ್ಯಕ್ತವಾಗುತ್ತಿದೆ.
ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜಿ. ಎಸ್. ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದು,
ಆದಿ ಜಾಂಬವ ಅಭಿವೃದ್ಧಿ ನಿಗಮವನ್ನು ಆರಂಭ ಮಾಡಲು ವಿರೋಧ ವ್ಯಕ್ತಪಡಿಸಿದ್ದಾರೆ. ಮಾಜಿ ಸಚಿವ ಹೆಚ್. ಆಂಜನೇಯ ವಿರುದ್ಧ ವಾಗ್ಧಾಳಿ ನಡೆಸಿದ ಅವರು, ಆಂಜನೇಯರವರಿಗೆ ಮಂತ್ರಿಗಿರಿ, ಶಾಸಕರಾಗಿ ಮಾಡಿದ್ದು ಚಿತ್ರದುರ್ಗದ ಜಿಲ್ಲೆಯವರು. ಹಂಪಿಯಲ್ಲಿರುವ ಮಾತಂಗೆ ಪರ್ವತ ಮಠದಲ್ಲಿ ಅವರ ಕುಟುಂಬವೇ ಟ್ರಸ್ಟಿಯಾಗಿದೆ. ಇವರಿಂದ ಜಿಲ್ಲಾ ಮಾದಿಗರನ್ನು ದಾರಿ ತಪ್ಪಿಸುವ ಕೆಲಸ ಆಗುತ್ತಿದೆ ಎಂದು ದೂರಿದ್ದಾರೆ.