ಈ ಬಜೆಟ್ ನ್ನು 4 ವರ್ಷಗಳ ಹಿಂದೆಯೇ ಮೋದಿ ನೀಡದಿರುವುದಕ್ಕೆ ಕಾರಣವೇನು ಗೊತ್ತಾ?
ಶನಿವಾರ, 2 ಫೆಬ್ರವರಿ 2019 (08:16 IST)
ಬೆಂಗಳೂರು : ಪ್ರಧಾನಿ ಮೋದಿ ಸರ್ಕಾರದ ಕೊನೆಯ ಬಜೆಟ್ ಶುಕ್ರವಾರ ಮಂಡನೆಯಾಗಿದ್ದು, ಜನ ಎಷ್ಟೋ ವರ್ಷಗಳಿಂದ ಕಾಯುತ್ತಿದ್ದ ಈ ಬಜೆಟ್ ನ್ನು 4 ವರ್ಷಗಳ ಹಿಂದೆಯೇ ಯಾಕೆ ನೀಡಲು ಆಗಲಿಲ್ಲವೆಂಬ ವಿಚಾರವನ್ನು ಸಂಸದ ಪ್ರತಾಪ್ ಸಿಂಹ ಬಹಿರಂಗಪಡಿಸಿದ್ದಾರೆ.
ಬಜೆಟ್ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಂತಹ ಬಜೆಟ್ ಗೋಸ್ಕರ ಜನ ಎಷ್ಟೋ ವರ್ಷಗಳಿಂದ ಕಾದಿದ್ದರು. ಇದನ್ನು ಮೋದಿಯವರು 2014ರಲ್ಲಿ ಅಧಿಕಾರಕ್ಕೆ ಬಂದ ಪ್ರಾರಂಭದಲ್ಲಿಯೇ ಕೊಡಬೇಕೆಂಬ ಉದ್ದೇಶ ಇದ್ದರೂ ಕೂಡ ಈ ಹಿಂದೆ 10 ವರ್ಷಗಳ ಕಾಲ ಯುಪಿಎದವರು ಲೂಟಿ ಹೊಡೆದು ಖಜಾನೆಯನ್ನು ಬರಿದು ಮಾಡಿ ಹೋಗಿದ್ದರಿಂದಾಗಿ ಅದನ್ನು ಸರಿಪಡಿಸಲು 4 ವರ್ಷ ಬೇಕಾಯಿತು’ ಎಂದು ಹೇಳಿದ್ದಾರೆ.
‘ಈಗ ಖಜಾನೆಯನ್ನು ಸರಿಪಡಿಸಿ, ಜಿಎಸ್‍ಟಿ ತಂದು, ನೋಟು ನಿಷೇಧ ಮಾಡಿ, ತೆರಿಗೆಯಲ್ಲಿ ಸುಧಾರಣೆಗಳನ್ನು ತಂದು, ಬ್ಯಾಂಕ್ ಗಳಲ್ಲಿ ಎನ್ ಪಿಎ(ಕಾರ್ಯನಿರ್ವಹಿಸದ) ಮಾಡುತ್ತಿದ್ದರೋ ಅವರನ್ನು ಕೂಡ ಹಿಡಿದುಕೊಂಡು ಬಂದು 3 ಲಕ್ಷ ರೂ. ಕಕ್ಕಿಸಿ, ಇಂದು ದೇಶ ಅರ್ಥ ವ್ಯವಸ್ಥೆಯನ್ನು ಸರಿಸ್ಥಿತಿಗೆ ತಂದು ರೈತರಿಗೆ, ತೆರಿಗೆದಾರರಿಗೆ, ಮಧ್ಯಮವರ್ಗದವರಿಗೆ, ದೀನ ದಲಿತರಿಗೆ ಹೀಗೆ ಎಲ್ಲರಿಗೂ ಕೂಡ ಏಕಕಾಲಕ್ಕೆ ನ್ಯಾಯಕೊಡುವಂತಹ ಬಜೆಟ್ಟನ್ನು ಇಂದು ಮಂಡಿಸಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.