ನವದೆಹಲಿ: ಲೋಕಸಭೆ ಚುನಾವಣೆಗೂ ಮೊದಲು ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ನಲ್ಲಿ ತೆರಿಗೆದಾರರಿಗೆ ಮೋದಿ ಸರ್ಕಾರ ಬಂಪರ್ ಗಿಫ್ಟ್ ಕೊಟ್ಟಿದೆ.
ಆದಾಯ ತೆರಿಗೆ ಮಿತಿ ದ್ವಿಗುಣಗೊಳಿಸಿರುವ ಕೇಂದ್ರ ಸರ್ಕಾರ ಈ ಹಿಂದೆ ಇದ್ದ 2.5 ಲಕ್ಷ ರೂ. ಗಳ ಮಿತಿಯನ್ನು 5 ಲಕ್ಷ ರೂ.ಗಳಿಗೆ ಏರಿಕೆ ಮಾಡಿದೆ. ಇದರಿಂದ 3 ಕೋಟಿ ಆದಾಯ ತೆರಿಗೆ ಪಾವತಿದಾರರಿಗೆ ಅನುಕೂಲವಾಗಲಿದೆ. ನಿಶ್ಚಿತ ಠೇವಣಿಯ ಬಡ್ಡಿಗೆ 40 ಸಾವಿರ ರೂ.ವರೆಗೆ ತೆರಿಗೆ ವಿನಾಯಿತಿ ನೀಡಲಾಗಿದೆ.
ಸ್ಟಾಂಡರ್ಡ್ ಡಿಡಕ್ಷನ್ ಮಿತಿ 40 ಸಾವಿರದಿಂದ 50 ಸಾವಿರದರೆಗೆ ಏರಿಕೆ ಮಾಡಲಾಗಿದೆ. ಉಳಿತಾಯ ಯೋಜನೆಗಳ ಮೂಲಕ 1.5 ಲಕ್ಷ ತೆರಿಗೆ ಉಳಿಕೆಯಾಗಲಿದೆ. ಕಾರ್ಮಿಕರ ಕನಿಷ್ಟ ಆದಾಯ ಮಿತಿ 21 ಸಾವಿರಕ್ಕೆ ಏರಿಕೆ ಮಾಡಲಾಗಿದೆ.
ಇನ್ನು, ಮೋದಿ ಸರ್ಕಾರದ ಬಹುಚರ್ಚಿತ ನೋಟ್ ಬ್ಯಾನ್ ನಿಯಮದಿಂದ ತೆರಿಗೆ ಪಾವತಿದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇದರಿಂದ ಆದಾಯವೂ ಹೆಚ್ಚಳವಾಗಿದೆ ಎಂದು ಸಚಿವ ಪಿಯೂಷ್ ಗೋಯಲ್ ಬಜೆಟ್ ಮಂಡನೆ ವೇಳೆ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ