ಮಾನವನಿಗೆ ಯಶಸ್ವಿಯಾಗಿ ‘ಹಂದಿ ಹೃದಯ’ ಅಳವಡಿಸಿದ ವೈದ್ಯರು

ಮಂಗಳವಾರ, 11 ಜನವರಿ 2022 (20:25 IST)
ಹೃದಯ ಸಂಬಂಧಿ ರೋಗಿಗೆ ಹಂದಿಯ ಹೃದಯವನ್ನು ಅಮೆರಿಕದ ವೈದ್ಯರು ಯಶಸ್ವಿಯಾಗಿ ಅಳವಡಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ವೈದ್ಯಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ಸಾಧನೆ ಮಾಡಲಾಗಿದ್ದು, ಅಂಗಾಂಗ ದಾನಗಳ ದೀರ್ಘಕಾಲದ ಕೊರತೆಯನ್ನು ಪರಿಹರಿಸಲು ಒಂದು ದಿನ ಸಹಾಯ ಮಾಡುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ರೋಗಿ ಡೇವಿಡ್ ಬೆನೆಟ್ ಗೆ ಮಾನವ ಕಸಿ ಮಾಡಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಗಿತ್ತು. ಅವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಹೊಸ ಅಂಗವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನಿರ್ಧರಿಸಲು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
 ಈ ಐತಿಹಾಸಿಕ ಶಸ್ತ್ರಚಿಕಿತ್ಸೆಯು ಶುಕ್ರವಾರ ನಡೆಯಿತು ಎಂದು ಮೇರಿಲ್ಯಾಂಡ್ ಮೆಡಿಕಲ್ ಸ್ಕೂಲ್ ವಿಶ್ವವಿದ್ಯಾಲಯವು ಸೋಮವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ