ನಕಲಿ ವೈದ್ಯರ ಹಾವಳಿಗೆ ಬೀಳುತ್ತಾ ಬ್ರೇಕ್?

ಭಾನುವಾರ, 18 ಜುಲೈ 2021 (19:59 IST)
ನಕಲಿ‌ ವೈದ್ಯರ ಹಾವಳಿಗೆ ಇನ್ನು‌ಮುಂದೆ ಕಠಿವಾಣ ಹಾಕಲು ಸರ್ಕಾರ ಆಯಾ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ನೀಡುವ ಆದೇಶ ಮುಂದಿನ ವಾರದಲ್ಲಿ ಹೊರಬೀಳುವ ಸಾದ್ಯತೆ ಇದೆ.ಇನ್ನು ನಕಲಿ‌ವೈದ್ಯರೇ ಎಚ್ಚರ‌.ನಿಮ್ಮ‌ಬಂಡವಾಳ ಬಯಲು ಮಾಡಲು ಸರ್ಕಾರ ಕಟ್ಟು ನಿಟ್ಟಿನ ನಿಯಮಾವಳಿ‌‌ರೂಪಿಸಿದೆ.ಬಿ.ಬಿ.ಎಂ.ಪಿ  ವ್ಯಾಪ್ತಿಯಲ್ಲಿ ‌ ಕಳೆದ‌ ಇಪ್ಪತ್ತು ವರುಷಗಳಿಂದ ನಕಲಿವೈದ್ಯರ ಸಂಖ್ಯೆ ಹೆಚ್ಚಾಗುತ್ತಿದೆ.ಹೋಮಿಯೋಪತಿ.ಹಾಲೋಪತಿ.ಅಯುರ್‌ವೇದ‌   ಮತ್ತು ಯುನಾನಿ  ಯ ಬೋರ್ಡ್ ಇರುವ ಡಾಕ್ಟರ ಗಳ‌ ಹಾವಳಿ‌‌ ದಿನದಿಂದ ದಿನಕ್ಕೆ ಏರುತ್ತಲೇ‌ಇದೆ. ಸರ್ಕಾರ ನಿಯಂತ್ರಿಸಲು ಸಾದ್ಯವಾಗುತ್ತಿಲ್ಲ. ಬಿ.ಬಿ.ಎಂ.ಪಿ  ವ್ಯಾಪ್ತಿಯಲ್ಲಿ‌ ಟ್ರೇಡ್ ಲೈಸನ್ಸ್  ಕೊಡುವ ಅಧಿಕಾರ ಮಾತ್ರ‌ಇದೆ.ಅವರನ್ನು ನಿಯಂತ್ರಿಸುವ ಅಧಿಕಾರವಿಲ್ಲ.ಬಹಳ ವರುಷಗಳಿಂದ  ಅಧಿಕಾರ ನೀಡುವಂತೆ ಚರ್ಚೆ ನಡೆಯುತ್ತಿತ್ತು.ಆ ಕಾಲ ಕೂಡಿ ಬಂದಿದೆ.ಮುಂದಿನ ವಾರದಲ್ಲಿ ನಗರದಲ್ಲಿ ರುವ ನಕಲಿ ವೈದ್ಯರ ಹಾವಳಿಗೆ  ಬ್ರೇಕ್ ಹಾಕುವ ಅಧಿಕಾರ ಬಿ.ಬಿ.ಎಂ.ಪಿ ನೀಡುವ ಆದೇಶ ಹೊರಬೀಳಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ