ಸಂಚಾರಿ ಪೊಲೀಸರ ಜೀವಕ್ಕೆ ಕುತ್ತು ತರ್ತಿದೀಯಾ ಬಾಡಿ ವಾರ್ನ್ ಕ್ಯಾಮೆರಾ?

ಬುಧವಾರ, 19 ಜುಲೈ 2023 (17:36 IST)
ಇತ್ತಿಚಿನ ದಿನಗಳಲ್ಲಿ ಸಂಚಾರಿ ಪೊಲೀಸರಿಗೆ  ಹಠಾತ್ ಹೃದಯಘಾತ ಕಾಣಿಸಿಕೊಳ್ಳುತ್ತಿದೆ.ಮೊನ್ನೆ ಕರ್ತವ್ಯದ ವೇಳೆ ಹೃದಯಾಘಾತದಿಂದ  ಹಲಸೂರು ಗೇಟ್ ಸಂಚಾರಿ ಎಎಸ್ಐ ಸಾವನಾಪ್ಪಿದ್ದಾನೆ.ಈ ರೀತಿಯ ಹೃದಯಘಾತಕ್ಕೆ ಬಾಡಿ ವಾರ್ನ್ ಕ್ಯಾಮೆರಾ ಕಾರಣ ಅಂತ ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತವಾಗಿತ್ತು .ಅತ್ತ ತಜ್ಞ ವೈದ್ಯರಿಂದಲೂ ಕೂಡ ಬಾಡಿ ವಾರ್ನ್ ಕ್ಯಾಮೆರಾದ ರೆಡಿಷನ್ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
 
ಕಿಲ್ಲರ್ ರೇಡಿಯೇಷನ್ ನಿಂದ ಆಗುವ ಅಪಾಯದ ಬಗ್ಗೆ ತಜ್ಞ ವೈದ್ಯರು ಮಾಹಿತಿ ನೀಡಿದ್ದಾರೆ.8 ಗಂಟೆಗೂ ಹೆಚ್ಚು ಬಾಡಿ ಕ್ಯಾಮೆರಾ ಬಳಕೆಯಿಂದ ಹೃದಯಕ್ಕೆ ಅಪಾಯ ಅಂತ ಎಚ್ವರಿಕೆ ಕೊಟ್ಟಿದ್ದಾರೆ.ಕಾರ್ಡಿಯಾಕ್ ಅರೆಸ್ಟ್ ಗೆ ಬಾಡಿ ವಾರ್ನ್ ಕ್ಯಾಮೆರಾ ಕೂಡ ಕಾರಣವಾಗಿದೆ.ಇತ್ತಿಚಿಗೆ ಪೊಲೀಸರಲ್ಲಿ ಎದೆ ನೋವು, ಕತ್ತು ಹಾಗೂ ಅಕ್ಕಪಕ್ಕದ ಭುಜಗಳು ನೋವು ಕಾಣಿಸಿಕೊಳ್ತಿದೆ.ಹೃದಯ ಅಕ್ಕ ಪಕ್ಕದ ನರಗಳ ಸೆಳೆತ ಕೂಡ ಕಾಣಿಸಿಕೊಳ್ತಿದೆ.ಪೊಲೀಸ್ ಇಲಾಖೆ ಗಮನ ಹರಿಸಿ ಪರ್ಯಾಯ ವ್ಯವಸ್ಥೆ ಮಾಡಲು ಸಲಹೆ ನೀಡಲಾಗಿದೆ.ಜೊತೆಗೆ ಜನರ ಜೀವಕ್ಕೆ ಕಂಟಕವಾಗಿರುವ ರೇಡಿಯೇಷನ್ ಬಗ್ಗೆಯೂ ಎಚ್ಚರಿಕೆ ನೀಡಲಾಗಿದೆ.
 
ಇತ್ತೀಚಿನ ದಿನದಲ್ಲಿ ಹೃದಯಘಾತ, ಕ್ಯಾನ್ಸರ್ ಸಮಸ್ಯೆಗೆ ರೇಡಿಯೇಷನ್ ಮುಖ್ಯ ಕಾರಣವಾಗಿದೆ.ಮೊಬೈಲ್ ಫೋನ್, ಎಲೆಕ್ಟ್ರಾನಿಕ್ ಡಿವೈಸ್ ರೇಡಿಯೇಷನ್ ಜೀವಕ್ಕೆ ಕುತ್ತು ಅಂತ ಡಾ.‌ಎಚ್ಚರಿಕೆ ಕೊಟ್ಟಿದ್ದಾರೆ.ನಿರಂತರವಾಗಿ ಕ್ಯಾಮರಾ ಬಳಕೆಯಿಂದ ರೇಡಿಯೇಷನ್ ಅಟ್ಯಾಕ್ ಆಗಲಿದೆ.ಇದರಿಂದ ಹೃದಯ,ನರಗಳ ಮೇಲೆ ಪರಿಣಾಮ ಬೀರುತ್ತೆ.ಅಪಾಯದ ಬಗ್ಗೆ ವೈದ್ಯ ನಿರಂತರ ಗಣೇಶ್ ಮಾಹಿತಿ  ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ