ಭಯೋತ್ಪಾದಕರನ್ನ ಹಿಡಿದಿದ್ದಾರೆ. ನಮ್ಮ ಪೊಲೀಸ್ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಅವರಿಗೆ ಅಭಿನಂದನೆ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.ಇಂತಹ ಸೂಕ್ಷ್ಮ ವಿಚಾರದಲ್ಲಿ ಕೆಲಸ ಮಾಡಿದ್ದಾರೆ.ಉಗ್ರರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಸರ್ಕಾರ ಕೂಡ ಈ ಬಗ್ಗೆ ಹೆಚ್ಚು ಗಮನ ಕೊಡಬೇಕು.ಇತ್ತೀಚೆಗೆ ರಸ್ತೆಗಳಲ್ಲಿ ಕೊಲೆಗಳಾಗ್ತಿವೆ.ಇದರ ಬಗ್ಗೆ ಜನರಿಗೆ ಆತಂಕ ಎದುರಾಗಿದೆ.ಕೂಡಲೇ ಸರ್ಕಾರ ಇಂತ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ಗೆ ಎನ್ ಡಿ ಎ ಆಹ್ವಾನ ನೀಡಿದ್ದೀಯಾ ಎಂಬ ಪ್ರಶ್ನೆ ವಿಚಾರವಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು,ನೋಡಿ ಪದೇ ಪದೇ ಈ ವಿಷ್ಯಗಳಲ್ಲಿ ಎಳೆಯಬೇಕಿಲ್ಲ.ನಮ್ಮ ರಾಜ್ಯಕ್ಕೆ ಎರಡು ರಾಷ್ಟ್ರೀಯ ಪಕ್ಷಗಳಿಂದ ಅನ್ಯಾಯ ಆಗಿದೆ.ನಾಡಿನ ಜನತೆಗೆ ಎರಡು ರಾಷ್ಟ್ರೀಯ ಪಕ್ಷಗಳ ಮಾರಕ ಎಂಬುದು ಎಲ್ಲಿಯವರೆಗೆ ಮನವರಿಕೆ ಆಗುವುದಿಲ್ಲ.ಅಲ್ಲಿಯವರೆಗೆ ನಮ್ಮ ರಾಜ್ಯದ ನೀರಾವರಿ ಯೋಜನೆಗಳಿರಬಹುದು.ನಮ್ಮ ರಾಜ್ಯದ ಅಭಿವೃದ್ಧಿ ಇರಬಹುದು.ಯಾವ ರೀತಿ ೭೫ ವರ್ಷಗಳಾದರು,ಸಮೃದ್ಧಿಯಾಗಿ,ಪ್ರಕೃತಿ ಸಂಪತ್ತು ಇದ್ರು,ಸರ್ಕಾರದಲ್ಲಿ ಹಣ ಕೊರತೆ ಇಲ್ಲ.ಕೇಂದ್ರ ಸರ್ಕಾರದ ಕೆಲವು ನಿಲುವುಗಳಿಂದ ಕೇಂದ್ರ ಸರ್ಕಾರ ಅಂದ್ರೆ ಬಿಜೆಪಿ ಅಥವಾ ಕಾಂಗ್ರೆಸ್ ಸರ್ಕಾರಗಳಿಂದ ನಮ್ಮ ರಾಜ್ಯವನ್ನು ಯಾವ ರೀತಿ ಕಡೆಗಣಿಸಿದ್ದಾರೆ.ವಿಶೇಷ ನೀರಿನ ಯೋಜನೆಗಳು ಹಂಚಿಕೆ ವಿಷಯ ಬಂದಾಗ ಕೇಂದ್ರ ಸರ್ಕಾರಗಳ ಧೋರಣೆ ಎನಿದೆ? .ಈ ರಾಜ್ಯಕ್ಕೆ ಧ್ವನಿ ಎತ್ತಿ ಕೆಲಸ ಮಾಡವ ಶಕ್ತಿ ಇರೋದು ಜೆಡಿಎಸ್ ಗೆ , ಎಲ್ಲಿಯವರೆಗೆ ಜನರಿಗೆ ಮನವರಿಕೆ ಮಾಡಬೇಕು.ಆ ಬಗ್ಗೆ ನನ್ನ ಹೊಸ ಚಿಂತನೆ ಇದೆ.ಈ ಹೊಸ ಇಂಡಿಯಾ ಹೋಗೋದು ಅಥವಾ ಎನ್ ಡಿ ಎ ಜೊತೆ ಹೋಗೋದು ಸೆಕೆಂಡರಿ ಅಂತಾ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ರು.