ಮೈತ್ರಿ ಸರಕಾರವೇ ಬಿಜೆಪಿ ಟಾರ್ಗೆಟ್ ಅಂತೆ...!
ರಾಜ್ಯದಲ್ಲಿರುವ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರವನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಹೀಗಂತ ಪ್ರಭಾವಿ ಸಚಿವರೊಬ್ಬರು ಆರೋಪ ಮಾಡಿದ್ದಾರೆ.
ಯಾರೋ ಐಟಿಗೆ ಮಾಹಿತಿ ಕೊಟ್ಟಿರಬಹುದು. ಚುನಾವಣಾ ಹೊಸ್ತಿಲಲ್ಲಿ ದಾಳಿ ಆಗಿದೆ. ಇದರಿಂದಾಗಿ ಸಮ್ಮಿಶ್ರ ಸರ್ಕಾರವನ್ನು ಬಿಜೆಪಿ ಟಾರ್ಗೆಟ್ ಮಾಡಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ದೂರಿದ್ದಾರೆ.
ಚುನಾವಣಾ ಸಂದರ್ಭದಲ್ಲಿ ಇದು ರಾಜಕೀಯ ಪ್ರೇರಿತ ದಾಳಿಯಾಗಿದೆ ಅಂತಾನೂ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.