ಸರ್ವಾಧಿಕಾರಿ ಕಿಮ್‌ ಎದುರು ನಿಂತು ಫೋಟೊ ತೆಗೆದ ಫೋಟೋಗ್ರಾಫರ್‌ ಗೆ ಆದ ಗತಿ ಏನು ಗೊತ್ತಾ?

ಗುರುವಾರ, 28 ಮಾರ್ಚ್ 2019 (10:13 IST)
ಉತ್ತರ ಕೊರಿಯಾ : ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್ ಉನ್ ನ ಪೋಟೊ ತೆಗೆಯಲು ಕಿಮ್‌ ನ ವೈಯಕ್ತಿಕ ಫೋಟೋಗ್ರಾಫರ್‌ ಆತನ  ಎದುರು ನೇರವಾಗಿ ನಿಂತುಕೊಂಡಿದ್ದಕ್ಕೆ ಆತನನ್ನು ಕೆಲಸದಿಂದ ತೆಗೆಯಲಾಗಿದೆ.

ಮಾ.10 ರಂದು ನಡೆದ ಚುನಾವಣೆ ವೇಳೆ ಮತದಾನಕ್ಕೆ ಆಗಮಿಸಿದ ಕಿಮ್‌ ಫೋಟೋ ತೆಗೆಯಲು ಎಲ್ಲ ಛಾಯಾಗ್ರಾಹಕರು ಮುಂದಾದರು. ಈ ವೇಳೆ ಆತನ ಅಧಿಕೃತ ಫೋಟೋಗ್ರಾಫರ್‌ ನೇರ ಫೋಟೋ ತೆಗೆಯಲು ಅವರಿಂದ ಎರಡು ಅಡಿ ಅಂತರದಲ್ಲಿ ನಿಂತಿದ್ದಾನೆ.


ಅಧ್ಯಕ್ಷರ ನೇರವಾದ ಆಂಗಲ್ ನಿಂದ ಫೋಟೋ ತೆಗೆಯುವುದು ಕಾನೂನು ಬಾಹಿರವೆಂದು ಆತನನ್ನು ಕೆಲಸದಿಂದ ವಜಾ ಮಾಡಲಾಗಿದೆ. ಅಷ್ಟೇ ಅಲ್ಲದೇ ಇದೀಗ ಉತ್ತರ ಕೊರಿಯಾದಲ್ಲಿ ಈತನನ್ನು ಎರಡನೇ ದರ್ಜೆಯ ನಾಗರೀಕನ ರೀತಿಯಲ್ಲಿ ನೋಡಲಾಗುತ್ತದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ