ಎ. ಟಿ. ಎಂ. ಕಳ್ಳತನಕ್ಕೆ ಬ್ರೇಕ್ ಹಾಕಿದ ನಾಯಿ

ಮಂಗಳವಾರ, 5 ಜುಲೈ 2022 (14:41 IST)
ಜಾರ್ಖಂಡ್​ದ ಚೌಪರಾನ್ ಪೊಲೀಸ್ ಠಾಣೆಯ ಚೈತಿ ಗ್ರಾಮದ ಜಿಟಿ ರಸ್ತೆಯಲ್ಲಿರುವ ಮನೆಯೊಂದರ ನೆಲ ಮಹಡಿಯಲ್ಲಿರುವ ಆಕ್ಸಿಸ್ ಬ್ಯಾಂಕ್ ಎಟಿಎಂಗೆ ರಾತ್ರಿ ವೇಳೆ ಗ್ಯಾಸ್ ಕಟರ್, ಎಲ್‌ಪಿಜಿ ಸಿಲಿಂಡರ್ ಮತ್ತು ಸುತ್ತಿಗೆಯೊಂದಿಗೆ ದರೋಡೆಕೋರರ ತಂಡವೊಂದು ದರೋಡೆ ನಡೆಸಲು ಮುಂದಾಗಿತ್ತು.

ಇನ್ನೇನು ದರೋಡೆ ಆಗೇಬಿಟ್ಟಿತು
ಇನ್ನೇನು ದರೋಡೆಕೋರರು ಎಟಿಎಂನಿಂದ ಹಣ ಕದ್ದೇ ಬಿಟ್ಟರು ಎಂಬಷ್ಟರಲ್ಲಿ ನಾಯಿಯೊಂದು ದರೋಡೆಯನ್ನು ತಡೆದಿದೆ. ₹27 ಲಕ್ಷ ಹಣ ಎಟಿಎಂನಲ್ಲಿ ಇತ್ತು ಎಂದು ಮೂಲಗಳು ತಿಳಿಸಿವೆ.

ಸಾಕು ನಾಯಿ ಹೆಸರೇನು ಗೊತ್ತೇ?
ಎಟಿಎಂ ಇರುವ ಮನೆ ಸುಧೀರ್ ಬರ್ನ್‌ವಾಲ್ ಎಂಬವರ ಒಡೆತನದಲ್ಲಿದೆ. ದರೋಡೆಕೋರರು ಎಟಿಎಂ ಬಳಿ ಕಸರತ್ತು ನಡೆಸುತ್ತಿರುವುದನ್ನು ಗಮನಿಸಿದ ಬರ್ನ್ವಾಲ್ ಅವರ ಸಾಕು ನಾಯಿ ಸಾಂಬಾ ಬೊಗಳಲು ಪ್ರಾರಂಭಿಸಿದೆ. ಅಷ್ಟು ಹೊತ್ತಿಗಾಗಲೇ ದರೋಡೆಕೋರರು ಯಂತ್ರವನ್ನು ಬಹುತೇಕ ಕತ್ತರಿಸುವುದನ್ನು ಮುಗಿಸಿದ್ದರು.

ಅರೇ! ಇಷ್ಟು ಹೊತ್ತಿಗೆ ಏಕೆ ಬೊಗಳುತ್ತಿದೆ ನಾಯಿ?
ಆದರೆ ನಾಯಿ ಜೋರಾಗಿ ಕೂಗುತ್ತಿರುವುದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಅರೇ, ನಾಯಿ ಏಕೆ ಈ ರಾತ್ರಿ ಇಷ್ಟು ಜೋರಾಗಿ ಬೊಗಳುತ್ತಿದೆ ಎಂದು ಮನೆಯಿಂದ ಹೊರಗೆ ಬಂದಿದ್ದಾರೆ. ಹೀಗೆ ಜನರು ಎಚ್ಚರಗೊಂಡು ಹೊರಗಡೆ ಬಂದಿದ್ದನ್ನು ಕಂಡು ಎಟಿಎಂ ಹಣ ಕದಿಯಲು ಬಂದಿದ್ದ ದರೋಡೆಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ