ಸಹೋದರರಿಬ್ಬರಿಂದ ನಿರಂತರ ಅತ್ಯಾಚಾರ: 5 ತಿಂಗಳ ಗರ್ಭಿಣಿ ಸಂತ್ರಸ್ತೆಯನ್ನು ಜೀವಂತ ಹೂಳಲು ಯತ್ನ

Sampriya

ಶುಕ್ರವಾರ, 25 ಜುಲೈ 2025 (16:01 IST)
ಭುವನೇಶ್ವರ: ಒಡಿಶಾದ ಜಗತ್‌ಸಿಂಗ್‌ಪುರ ಜಿಲ್ಲೆಯಲ್ಲಿ ಇಬ್ಬರು ಸಹೋದರರು 15 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಆಕೆ 5 ತಿಂಗಳ  ಗರ್ಭಿಣಿ ಎಂದು ಗೊತ್ತಾದ್ಮೇಲೆ ಆಕೆಯನ್ನು ಜೀವಂತವಾಗು ಹೂಳಲು ಯತ್ನಿಸಿದ ಘಟನೆ ವರದಿಯಾಗಿದೆ.  

ಪ್ರಕರಣ ಸಂಬಂಧ ಬನಶ್ಬರ ಗ್ರಾಮದ ಭಾಗ್ಯಧರ್ ದಾಸ್ ಮತ್ತು ಪಂಚನನ್ ದಾಸ್ ಎಂಬ ಇಬ್ಬರು ಸಹೋದರರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಮೂರನೇ ಆರೋಪಿಯ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ. 

ಪೊಲೀಸರ ಪ್ರಕಾರ, ಆರೋಪಿಯು ಅಪ್ರಾಪ್ತೆಯ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಾನೆ. ಆಕೆಯ ಗರ್ಭಾವಸ್ಥೆಯನ್ನು ಅವರು ಪತ್ತೆ ಮಾಡಿದಾಗ, ಅವರು ತಮ್ಮ ಅಪರಾಧವನ್ನು ಮರೆಮಾಚಲು ಅವಳನ್ನು ಜೀವಂತವಾಗಿ ಹೂಳಲು ಯತ್ನಿಸಿದ್ದಾರೆ. 

ಪೊಲೀಸ್ ಮೂಲಗಳ ಪ್ರಕಾರ, ಆರೋಪಿಗಳು ಯುವತಿಯನ್ನು ಕರೆಸಿಕೊಂಡು ಗರ್ಭಪಾತ ಮಾಡಿಸಿಕೊಳ್ಳಲು ಹೇಳಿದ್ದಾರೆ. ಗರ್ಭಪಾತ ಮಾಡಿಸಿಕೊಳ್ಳದಿದ್ದರೆ ಜೀವಂತವಾಗಿ ನಾಲೆಯಲ್ಲಿ ಹೂತು ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ.

ಸಂತ್ರಸ್ತೆ ಸ್ಥಳದಿಂದ ತಪ್ಪಿಸಿಕೊಂಡು ತನ್ನ ತಂದೆಯ ಬಳಿ ಹೇಳಿಕೊಂಡಿದ್ದಾಳೆ.  ಆಕೆಯನ್ನು ಜಿಲ್ಲಾ ಪ್ರಧಾನ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆಕೆಯ ತಂದೆ ಕುಜಾಂಗ್ ಪೊಲೀಸ್ ಠಾಣೆಯಲ್ಲಿ ಔಪಚಾರಿಕವಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ