ಹಿರಿಯ ಪೊಲೀಸ್ ರಿಂದ ಪೊಲೀಸರಿಗೇ ದೋಖಾ? ಕೋಟ್ಯಂತರ ಗೋಲ್ ಮಾಲ್ ಶಂಕೆ!
ಬುಧವಾರ, 19 ಜೂನ್ 2019 (16:20 IST)
ಹಿರಿಯ ಪೊಲೀಸ್ ಅಧಿಕಾರಿಗಳಿಂದ ಪೊಲೀಸ್ ಸಿಬ್ಬಂದಿಗೆ ದೋಖಾ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಮೈಸೂರು ಪೊಲೀಸ್ ಅಧಿಕಾರಿಗಳಿಂದ ಕೋಟಿ ಕೋಟಿ ಲೂಟಿ ಹೊಡೆಯಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ಮೈಸೂರಿನ ಪ್ರತಿಷ್ಠಿತ ಪೊಲೀಸ್ ಭವನದ ಹೆಸರಿನಲ್ಲಿ ಅಕ್ರಮ ನಡೆದಿದೆ ಎನ್ನಲಾಗುತ್ತಿದೆ. ಬರೋಬ್ಬರಿ 18ವರ್ಷದಿಂದ ಅವ್ಯವಹಾರದಲ್ಲೇ ನಡೆದುಕೊಂಡು ಬಂದಿರುವ ಪೊಲೀಸ್ ಭವನ ಈಗ ಸುದ್ದಿಯಾಗುತ್ತಿದೆ.
ಸ್ಪಂದನ ಸಹಕಾರ ಸಂಘದ ಹೆಸರಿನಲ್ಲಿ ಪೊಲೀಸ್ ಸಿಬ್ಬಂದಿಯಿಂದ ಹಣ ವಸೂಲಿ ಮಾಡಿ ಭವನ ನಿರ್ಮಾಣವಾಗಿತ್ತು.
ಹಣ ಹೊಡೆಯುವ ಸಲುವಾಗಿ ಪೊಲೀಸ್ ವೆಲ್‌ಫೇರ್ ಟ್ರಸ್ಟ್ ಸ್ಥಾಪಿಸಿ ವ್ಯವಹಾರ ನಡೆಸಲಾಗಿದೆ. ಸಹಕಾರ ಸಂಘದಿಂದ ಟ್ರಸ್ಟ್‌ಗೆ ವರ್ಗಾವಣೆಯಾದ ಮಾಹಿತಿ ಸಂಘದ ಸದಸ್ಯರಿಗೇ ಇಲ್ಲ. ಪೊಲೀಸ್ ವೆಲ್‌ಫೆರ್ ಟ್ರಸ್ಟ್ ಸ್ಥಾಪಿಸಿ ಸರ್ಕಾರಕ್ಕೂ ಹಣ ಕೊಡದೆ, ಪೊಲೀಸರಿಗೂ ಸಹಾಯ ಮಾಡದೆ ದೋಖಾ ಮಾಡಲಾಗಿದೆ.
40 ರಿಂದ 50 ಕೋಟಿ ರೂ.ವರೆಗೂ ಅವ್ಯವಹಾರ ಆಗಿರುವ ಆರೋಪ ಇದಾಗಿದೆ.
ಪೊಲೀಸ್ ಭವನ ನಿರ್ಮಾಣ ಸಂದರ್ಭದಲ್ಲಿ ಆಯುಕ್ತರಾಗಿದ್ದ ಕೆಂಪಯ್ಯ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ಈಗಲೂ ಸಿ.ಜೆ.ಮುರುಳೀಧರ್ ಎಂಬ ಎಎಸ್‌ಐ ಸಿಬ್ಬಂದಿಯಿಂದ ಟ್ರಸ್ಟ್ ಹೆಸರಿನಲ್ಲಿ ನಿರಂತರ ಅವ್ಯವಹಾರ ನಡೆಯುತ್ತಿದೆ.
ಸರ್ಕಾರಿ ಪೊಲೀಸ್ ಸೇವೆಯಲ್ಲಿದ್ದು, ಟ್ರಸ್ಟ್‌ಗೆ ಸಹಾಯಕ ಅಕೌಂಟೆಂಟ್ ಆಗಿದ್ದಾರೆ ಮುರುಳೀಧರ್. ಪಾಲಿಕೆಗೆ 1.65 ಲಕ್ಷ ರೂ. ಹಣ ಪಾವತಿಸಬೇಕಿದೆ ಪೊಲೀಸ್ ಭವನ.
ಪಾಲಿಕೆಯಿಂದ ನೀಲಿ ನಕ್ಷೆಯ ಅನುಮತಿಯನ್ನು ಪಡೆದುಕೊಳ್ಳದ ಪೊಲೀಸ್ ವೆಲ್‌ಫೇರ್ ಟ್ರಸ್ಟ್ ಈಗ ಚರ್ಚೆಗೆ ಗ್ರಾಸವೊದಗಿಸಿದೆ.
ಈವರೆಗೂ ಪೊಲೀಸ್ ಭವನದ ಕಟ್ಟಡ ಕಮಾಂಡೆಂಟ್ ಹೆಸರಿನಲ್ಲಿ ಇದೆ. ಪೊಲೀಸ್ ಭವನ ನಿರ್ಮಾಣ ಆಗಿರುವ ಸ್ಥಳವೂ ಸರ್ಕಾರದ ಆಸ್ತಿ. 5 ಎಕರೆ ಜಾಗದಲ್ಲಿ ನಿರ್ಮಾಣವಾಗಿದೆ ಪೊಲೀಸ್ ಭವನ. ಅಕ್ರಮವಾಗಿ ಪೊಲೀಸ್ ಭವನ ನಿರ್ಮಾಣವಾಗಿರುವ ಆರೋಪವೂ ಕೇಳಿಬಂದಿದೆ.