ಆರ್ ಬಿಐ ಹೆಸರಿನಲ್ಲಿ ದೋಖಾ

ಶುಕ್ರವಾರ, 24 ಮಾರ್ಚ್ 2023 (13:55 IST)
ಅತಿ ಆಸೆ ಗತಿ ಕೇಡು ಅನ್ನೋ ಮಾತಿದೆ‌.ಇದಕ್ಕೆ‌ ಪೂರಕವೆಂಬಂತೆ ಜನರ ಬಂಡವಾಳವನ್ನ ಎನ್ ಕ್ಯಾಶ್ ಮಾಡಿಕೊಂಡು ಕೋಟ್ಯಂತರ ರೂಪಾಯಿ ನೀಡುವುದಾಗಿ ಆಸೆ ತೋರಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದ 8 ಮಂದಿ ವಂಚಕರನ್ನು ಬಂಧಿಸುವಲ್ಲಿ ಸಿಸಿಬಿ ಯಶಸ್ವಿಯಾಗಿದೆ.ಆಶೋಕ್ ಕುಮಾರ್, ರಮೇಶ್ ಕುಮಾರ್, ಮಂಜುನಾಥ್,  ರಾಜ್ ಕುಮಾರ್, ಗಂಗರಾಜು, ಕುಮಾರೇಶ್ . ಮೂರ್ತಿ ನಾಯಕ್ , ಸಿದ್ದರಾಜು ನಾಯಕ್ ಬಂಧಿತ ಆರೋಪಿಗಳಾಗಿದ್ದು ಇವರಿಂದ 11.50 ನಗದು,ಬ್ಯಾಂಕಿನಲ್ಲಿದ್ದ 16 ಲಕ್ಷಕ್ಕಿಂತ ಹೆಚ್ಚು ಹಣ ವಶಕ್ಕೆ ಪಡೆದುಕೊಳ್ಳಲಾಗಿದೆ. ಆರ್ ಬಿಐ ಲಾಂಛನದ ಕಾಗದಪತ್ರ ಸೀಲ್ ಹಾಗೂ ಸಿಗ್ನೇಚರ್ ಗಳನ್ನು ನಕಲಿಯಾಗಿ ಸೃಷ್ಟಿಸಿಕೊಂಡು ವ್ಯವಹಾರ ಸಂಬಂಧವಾಗಿ ವಿದೇಶದಿಂದ 75 ಸಾವಿರ ಕೋಟಿ‌ ರೂಪಾಯಿ‌ ವರ್ಗಾವಣೆಯಾಗಿದೆ ಎಂದು  ಅರೋಪಿಗಳು ಬಿಂಬಿಸಿಕೊಂಡಿದ್ದರು. ಟ್ರಾನ್ಸ್ ಫರ್ ಆದ ಹಣವನ್ನ ಬಿಡಿಸಿಕೊಳ್ಳಬೇಕಾದರೆ ಮುಂಗಡವಾಗಿ 150 ಕೋಟಿ ಪಾವತಿಸಬೇಕಿದೆ. 20 ಲಕ್ಷ ಹಣ ಕಟ್ಟಿದರೆ ಏಳೂವರೆ ಕೋಟಿ ಕಮೀಷನ್ ಪಾವತಿಸುವುದಾಗಿ ಆಮಿಷವೊಡ್ಡಿದ್ದರು. ದೂರುದಾರರನ್ನು‌ ನಂಬಿಸಲು ದೆಹಲಿ ಹಾಗೂ ಮುಂಬೈನಲ್ಲಿರುವ ಆರ್ ಬಿಐ ಬ್ಯಾಂಕ್ ಬಳಿ ಕರೆದುಕೊಂಡು ಹೋಗಿ ಪೋಟೊ ತೆಗೆಸಿಕೊಂಡಿದ್ದರು. ಅಲ್ಲದೆ‌ ನಕಲಿ‌ ಆರ್ ಬಿಐ ಅಧಿಕಾರಿಯನ್ನು ಸೃಷ್ಟಿಸಿ ಯಾಮಾರಿಸಿದ್ದರು. ಹಣದ ಆಸೆ ಜೋತುಬಿದ್ದು ವ್ಯಕ್ತಿಯೊಬ್ಬರು40 ಲಕ್ಷ ರೂಪಾಯಿ ಪಾವತಿಸಿದ್ದರು‌. ಹಣ ಜಮೆಯಾಗುತ್ತಿದ್ದಂತೆ ಆರೋಪಿಗಳು ಎಸ್ಕೇಪ್ ಆಗಿದ್ದರು.‌ಈ ಸಂಬಂಧ ಆರ್.ಆರ್.ನಗರ‌ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ