ರಾಜ್ಯದ ಹಿತಕ್ಕೆ ನಿಮ್ಮ ಬಳಿ ಹಣವಿಲ್ವಾ?

ಸೋಮವಾರ, 11 ಸೆಪ್ಟಂಬರ್ 2023 (21:00 IST)
ರಾಜ್ಯದಲ್ಲಿ ಕಾಂಗ್ರೆಸ್​​ ಸರ್ಕಾರದ ಅವಾಸ್ತವಿಕ ಶಕ್ತಿ ಯೋಜನೆಯಿಂದಾಗಿ ಖಾಸಗಿ ಸಾರಿಗೆ ವ್ಯವಸ್ಥೆ ಅಯೋಮಯವಾಗಿದೆ ಎಂದು ರಾಜ್ಯ ಬಿಜೆಪಿ ಟ್ವೀಟ್​ ಮಾಡಿ ಕಿಡಿಕಾರಿದೆ.. ಖಾಸಗಿ ಆಟೋ, ಟ್ಯಾಕ್ಸಿ, ಬಸ್ ಚಾಲಕರ ಬದುಕನ್ನೇ ಕಿತ್ತುಕೊಂಡು ಬೀದಿ ಪಾಲು ಮಾಡಿದೆ. ಕಳೆದ ಮೂರು ತಿಂಗಳಿಂದ ಖಾಸಗಿ ಸಾರಿಗೆ ಸಂಘಗಳು ಸಿದ್ದರಾಮಯ್ಯ ಸರ್ಕಾರವನ್ನು ಎಚ್ಚರಿಸಿಕೊಂಡು ಬಂದಿದ್ದರೂ ಮೊಂಡಾಟವಾಡುವುದನ್ನು ಬಿಡಲಿಲ್ಲ. ಪರಿಣಾಮ ಇಂದು ಬಂದ್‌ನಿಂದ ಜನರು ಸಂಕಷ್ಟ ಅನುಭವಿಸುವಂತಾಗಿದೆ.
ನಮ್ಮಲ್ಲಿ ಹಣವಿಲ್ಲ ಎನ್ನುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೇ, ತುಷ್ಟೀಕರಣ ರಾಜಕೀಯಕ್ಕಾಗಿ, ಗಾಂಧಿ ಕುಟುಂಬದ ಒಲೈಕೆಗಾಗಿ ನೂರಾರು ಕೋಟಿ ಹಣವನ್ನು ಪೋಲು ಮಾಡುತ್ತಿದ್ದೀರಿ‌. ರಾಜ್ಯದ ಹಿತಕ್ಕೆ ನಿಮ್ಮ ಬಳಿ ಹಣವಿಲ್ವಾ ಎಂದು ಪ್ರಶ್ನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ