ನಗರದಲ್ಲಿ ಟ್ಯಾಕ್ಸಿಗಳ ಅಭಾವ-

ಬುಧವಾರ, 7 ಜೂನ್ 2023 (20:45 IST)
ನಗರದಲ್ಲಿ ಟ್ಯಾಕ್ಸಿಗಳ ಅಭಾವ ಶುರುವಾಗಿದೆ.ಶೇ 40-50 ರಷ್ಟು ಮಾತ್ರ ಟ್ಯಾಕ್ಸಿಗಳ ಸಂಚಾರ ಇದೆ.ಕೋವಿಡ್ ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾದ ಮಾಲೀಕರು ಈಗ ಮತ್ತಷ್ಟು ತತ್ತರಿಸಿ ಹೋಗಿದ್ದಾರೆ.ಇನ್ನು ಸಾರಿಗೆ ಇಲಾಖೆಯ ಅಂಕಿ ಅಂಶದ ಪ್ರಕಾರ ರಾಜ್ಯದ್ಯಂತ 3.38,342 ಕ್ಯಾಬ್ ಗಳು ಇದ್ದು,ಆದರಲ್ಲಿ 1,15,363, ಮ್ಯಾಕ್ಸಿಕ್ಯಾಬ್ ಗಳು ನೋಂದಾಣಿಯಾಗಿದೆ.ಆದ್ರೆ ಈಗ ರಸ್ತೆಗಿಳಿದಿರುವುದು 2 ರಿಂದ 2.50 ಲಕ್ಷ ವಾಹನಗಳು ಮಾತ್ರ.ಅಂದರೆ 4.54 ಲಕ್ಷ ಕ್ಯಾಬ್ ಗಳ ಪೈಕಿ ಈಗ ಇದೀಗ ಸಂಚಾರಿಸುತ್ತಿರುವ ಟ್ಯಾಕ್ಸಿಗಳ ಪ್ರಮಾಣ ಶೇ 40-50 ರಷ್ಟು ಮಾತ್ರ.ಎರಡು ವರ್ಷದ ಕೋವಿಡ್ ಲಾಕ್ ಡೌನ್ ನಿಂದಾಗಿ ಪೆಟ್ರೋಲ್ - ಡಿಸೇಲ್ ದರ ಏರಿಕೆಯಾಗಿದೆ. ಹೀಗಾಗಿ ಟ್ಯಾಕ್ಸಿ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಹೀಗೆ ನಾನಾ ಕಾರಣಿಗಳಿಗಾಗಿ ಟ್ಯಾಕ್ಸಿಗಳಿಗೆ ಅಭಾವ ಶುರುವಾಗಿದೆ.ನಗರದಲ್ಲಿ ಸರಿಯಾದ ಸಮಯಕ್ಕೆ ಟ್ಯಾಕ್ಸಿ ಸಿಗದೇ ಜನರು ಪರದಾಡುವಂತಾಗಿದೆ.ಕೆಲವೊಮ್ಮೆ ಗ್ರಾಹಕರಿಗೆ ಟ್ಯಾಕ್ಸಿ ಸಿಗಲ್ಲ.ಗ್ರಾಹಕರ ಬೇಡಿಕೆಗೆ ತಕ್ಕಂತೆ ಟ್ಯಾಕ್ಸಿ ಸೇವೆ ನೀಡಲಾಗುತ್ತಿಲ್ಲ ಎಂದು ಟ್ರಾವೆಲ್ ಮಾಲೀಕರ ಸಂಘದ ರಾಧಾಕೃಷ್ಣ ಹೋಲಾ ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ