ಬೆಂಗಳೂರು : ಉಪಚುನಾವಣೆಯ ಗೆಲುವಿನ ಬಳಿಕ ಡಿಸಿಎಂ ಹುದ್ದೆಯ ನಿರೀಕ್ಷೆಯಲ್ಲಿದ್ದ ಶಾಸಕ ರಮೇಶ್ ಜಾರಕಿಹೊಳಿಗೆ ಆ ಹುದ್ದೆ ಸಿಗುವುದು ಡೌಟ್ ಎನ್ನಲಾಗಿದೆ.
ಈ ಹಿಂದೆ ಮೈತ್ರಿ ಸರ್ಕಾರದಲ್ಲಿ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಲು ಡಿಸಿಎಂ ಹುದ್ದೆ ಸಿಗದಿರುವುದು ಒಂದು ಕಾರಣವಾಗಿತ್ತು ಎನ್ನಲಾಗಿದೆ. ಅಲ್ಲದೇ ಅವರು ರಾಜೀನಾಮೆ ನೀಡುವ ಮುನ್ನ ಯಡಿಯೂರಪ್ಪ ಅವರ ಬಳಿ ಡಿಸಿಎಂ ಹುದ್ದೆಗೆ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗಿದೆ.
ಆದರೆ ಈಗಾಗಲೇ ಬಿಜೆಪಿಯಲ್ಲಿ ಮೂರು ಡಿಸಿಎಂ ಹುದ್ದೆ ನೀಡಲಾಗಿದ್ದು, ಮತ್ತೊಂದು ಹುದ್ದೆ ನೀಡಲು ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದರಿಂದ ಹಾಗೂ ಈಗಾಗಲೇ ಡಿಸಿಎಂ ಹುದ್ದೆ ಆಕಾಂಕ್ಷಿಯಾಗಿದ್ದ ಶ್ರೀರಾಮುಲು ಇದರಿಂದ ಅಸಮಾಧಾನಗೊಳ್ಳಬಹುದು ಎಂಬ ಕಾರಣಕ್ಕೆ ಇದೀಗ ಶಾಸಕ ರಮೇಶ್ ಜಾರಕಿಹೊಳಿಗೆ ಆ ಹುದ್ದೆ ಸಿಗುವುದು ಡೌಟ್ ಎನ್ನಲಾಗಿದೆ.