ಡಾ. ಬಾಬು ಜಗಜೀವನ ರಾಂ ಸಂಶೋಧನಾ, ತರಬೇತಿ ಕೇಂದ್ರ ಕಾಮಗಾರಿ ಮತ್ತೆ ಶುರು

ಸೋಮವಾರ, 11 ಮೇ 2020 (21:46 IST)
ಕೊರೊನಾ ಸೊಂಕಿನ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ 88 ಕೋಟಿ ರೂ. ವೆಚ್ಚದ  ಡಾ. ಬಾಬು ಜಗಜೀವನ್ ರಾಂ ಸಂಶೋಧನಾ ಮತ್ತು ತರಬೇತಿ ಕೇಂದ್ರ  ನಿರ್ಮಾಣ ಕಾಮಗಾರಿಯನ್ನು ಕೂಡಲೇ ಪುನರ್ ಪ್ರಾರಂಭಿಸಬೇಕು.

ಹೀಗಂತ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಸೂಚಿಸಿದ್ದಾರೆ.  

ಬೆಂಗಳೂರಿನ ನಿರಾಶ್ರಿತರ ಪರಿಹಾರ ಕೇಂದ್ರದ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಈ  ಕಟ್ಟಡ  ಕಾಮಗಾರಿಯನ್ನು ಪರಿಶೀಲಿಸಿದ ಅವರು, ಐಎಎಸ್ , ಕೆಎಎಸ್‌ ಪರೀಕ್ಷಾ ಪೂರ್ವ ತರಬೇತಿ ನೀಡಲು, ಅಧ್ಯಯನ ಹಾಗೂ  ಸಂಶೋಧನೆ ನಡೆಸುವ ಉದ್ದೇಶದಿಂದ ನಿರ್ಮಿಸುತ್ತಿರುವ ಈ ಕಟ್ಟಡವು ವಿಶೇಷತೆಯನ್ನು ಹೊಂದಿದೆ.

ಅಂತರ್ ರಾಷ್ಟ್ರೀಯ ಗುಣಮಟ್ಟದ ಕಟ್ಟಡ ಇದಾಗಿದೆ. 1800  ಹಾಸನಗಳುಳ್ಳ  ಸಭಾಂಗಣ, 8 ಬೃಹತ್ ಬೋಧನ ಕೊಠಡಿ, ಗ್ರಂಥಾಲಯ, ಕಂಪ್ಯೂಟರ್ ಲಾಬ್, ಸೇರಿದಂತೆ ಆಧುನಿಕ ಸೌಲಭ್ಯಗಳುಳ್ಳ ಬೃಹತ್ ಕಟ್ಟಡ ಇದಾಗಿದೆ. ಈ ಕಟ್ಟಡದ ಗುಣಮಟ್ಟ ಹಾಗೂ ತಾಂತ್ರಿಕತೆಯ ಗುಣಮಟ್ಟ  ಅತ್ಯುತ್ತಮ ವಾಗಿರಬೇಕು. ನಿಗದಿತ ಅವಧಿಯೊಳಗೆ ಕಾಮಗಾರಿ  ಪೂರ್ಣ ಗೊಳಿಸಬೇಕು ಎಂದು ಅವರು ಸೂಚಿಸಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ