ದೇಶದಲ್ಲಿ ನಾನೇ ನಂ 1 ಗೃಹಸಚಿವ, ಹೇಳ್ಕೊಳ್ಳೋರು ಹೇಳ್ಕೊಳ್ಳಿ: ಡಾ ಜಿ ಪರಮೇಶ್ವರ್
ಪೊಲೀಸ್ ಇಲಾಖೆಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳನ್ನು ಮಾಧ್ಯಮಗಳು ಕೇಳಿದರೆ ನನಗೆ ಗೊತ್ತಿಲ್ಲ, ಮಾಹಿತಿಯಿಲ್ಲ ಎಂದು ಗೃಹಸಚಿವ ಡಾ ಜಿ ಪರಮೇಶ್ವರ್ ಹೇಳುತ್ತಾರೆ. ಇದೇ ಕಾರಣಕ್ಕೆ ಅವರು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗೊಳಗಾಗುತ್ತಾರೆ.
ಇದೇ ವಿಚಾರವನ್ನು ಇಂದು ಮಾಧ್ಯಮಗಳು ಅವರ ಗಮನ ಸೆಳೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಿಮ್ಮನ್ನು ಗೊತ್ತಿಲ್ಲ ಸಚಿವ ಎಂದು ಟ್ರೋಲ್ ಮಾಡುತ್ತಿದ್ದು ಅದೀಗ ಟ್ರೆಂಡ್ ಆಗ್ತಿದೆ. ಅದರ ಬಗ್ಗೆ ಏನು ಹೇಳ್ತೀರಿ ಎಂದು ಕೇಳಲಾಗಿದೆ.
ಇದಕ್ಕೆ ಉತ್ತರಿಸಿದ ಅವರು ಹೇಳ್ಕೊಳ್ರೀ ಬಿಡ್ರಿ. ಅವರಿಗೆ ಚ್ಯಾಟ್ ಜಿಟಿಪಿ ನೋಡಕ್ಕೆ ಹೇಳಿ. ಈ ದೇಶದಲ್ಲಿ ಗೃಹಸಚಿವರಲ್ಲಿ ಪ್ರಥಮ ಸ್ಥಾನದಲ್ಲಿರೋದು ಡಾ ಜಿ ಪರಮೇಶ್ವರ್ ಹೆಸರು. ಗೊತ್ತಿಲ್ಲ ಎಂದು ನಾನು ಹೇಳಿರುವಂತದ್ದು ಸ್ವಾಭಾವಿಕವಾಗಿ ಹೇಳಿರುವಂತಹದ್ದು. ಈಗ ನೀವೇನೋ ಪ್ರಶ್ನೆ ಕೇಳ್ತೀರಿ. ಎಲ್ಲದಕ್ಕೂ ನಾನು ಉತ್ತರ ಕೊಡಕ್ಕಾಗುತ್ತಾ? ಎಂದಿದ್ದಾರೆ.