ಕಾಂಗ್ರೆಸ್ ಸರ್ಕಾರ ಇರುವಾಗ ಭಾರತಕ್ಕೆ ಜಿಂದಾಬಾದ್ ಹೇಳ್ತಾರಾ, ಪಾಕಿಸ್ತಾನಕ್ಕೇ ಹೇಳೋದು: ಡಾ ಕೆ ಸುಧಾಕರ್

Krishnaveni K

ಮಂಗಳವಾರ, 9 ಸೆಪ್ಟಂಬರ್ 2025 (13:41 IST)
ಬೆಂಗಳೂರು: ಭದ್ರಾವತಿಯಲ್ಲಿ ಈದ್ ಮೆರವಣಿಗೆ ವೇಳೆ ಪಾಕಿಸ್ತಾನ ಜಿಂದಾಬಾದ್ ಎಂದ ಘಟನೆ ಬಗ್ಗೆ ಸಂಸದ ಡಾ ಕೆ ಸುಧಾಕರ್ ಕಿಡಿ ಕಾರಿದ್ದಾರೆ.

ಭದ್ರಾವತಿಯಲ್ಲಿ ಈದ್ ಮೆರವಣಿಗೆ ವೇಳೆ ಯುವಕರ ಗುಂಪೊಂದು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆಗಳನ್ನು ಕೂಗಿದೆ. ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರ ಬಗ್ಗೆ ಸುಧಾಕರ್ ಪ್ರತಿಕ್ರಿಯಿಸಿದ್ದಾರೆ.

‘ವಿಧಾನಸೌಧದಲ್ಲೇ ಪಾಕ್ ಜಿಂದಾಬಾದ್ ಎಂದು ಹೇಳಿದ್ದರು. ಕಾಂಗ್ರೆಸ್ ಇರುವಾಗ ಭಾರತ ಜಿಂದಾಬಾದ್ ಹೇಳ್ತಾರಾ? ಪಾಕಿಸ್ತಾನ ಜಿಂದಾಬಾದ್ ಎಂದೇ ಹೇಳೋದು. ಕಾಂಗ್ರೆಸ್ ಇರುವವರೆಗೂ ಭಾರತಕ್ಕೆ ಅಪಾಯವಿದೆ. ಇಂತಹವರನ್ನು ದೇಶದ್ರೋಹಿಗಳು ಎಂದು ಕರೆಯಬೇಕು. ಹಿಂದೂಗಳ ಮೇಲೆ ಗದಾಪ್ರಹಾರ ಮಾಡುತ್ತಿದ್ದಾರೆ. ಸರ್ಕಾರ ಇದಕ್ಕೆ ಪರೋಕ್ಷವಾಗಿ ಸಹಕಾರ ಕೊಡ್ತಿದೆ’ ಎಂದು ಸುಧಾಕರ್ ಕಿಡಿ ಕಾರಿದ್ದಾರೆ.

ವಿಧಾನಸೌಧದಲ್ಲೇ ಹೇಳ್ತಾರೆ, ಇದು ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರ. ಇನ್ನು ಈದ್ ಮಿಲಾದ್ ಆಚರಣೆ ವೇಳೆ ಪಾಕಿಸ್ತಾನ ಜಿಂದಾಬಾದ್ ಎಂದಿದ್ದು ನನಗೇನೂ ಅಚ್ಚರಿ ಎನಿಸಲಿಲ್ಲ. ಇಂತಹ ಭಾರತ ವಿರೋಧಿಗಳಿಗೆ ಕಾಂಗ್ರೆಸ್ ಸಹಕಾರ ಇರುವವರೆಗೂ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ