ಚಲನಚಿತ್ರೋತ್ಸವ ವೈಭವಕ್ಕೆ ಚಾಲನೆ

ಶುಕ್ರವಾರ, 4 ಮಾರ್ಚ್ 2022 (07:04 IST)
ಬೆಂಗಳೂರು : 13ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇಂದು ಸಂಜೆ ವರ್ಣರಂಜಿತವಾಗಿ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
 
ಬೊಮ್ಮಾಯಿ ಅವರು ದೀಪ ಬೆಳಗಿಸುವ ಮೂಲಕ ಚಲನಚಿತ್ರೋತ್ಸವಕ್ಕೆ ವೈಭವಕ್ಕೆ ಚಾಲನೆ ಕೊಟ್ಟರು. ಈ ವೇಳೆ ಸಿನಿಮಾ ಕುರಿತು ಮಾತನಾಡಿದ ಅವರು, ವೇದಿಕೆ ಮೇಲಿರುವ ಎಲ್ಲರೂ ಬಹಳ ಸಂತೋಷದಿಂದ ಚಾಲನೆ ನೀಡಿದ್ದೇವೆ.

1934 ಮಾರ್ಚ್ 03 ಅಂದರೆ ಇದೇ ದಿನ ಕನ್ನಡದ ‘ಸತಿ ಸುಲೋಚನಾ’ ಸಿನಿಮಾ ತೆರೆಕಂಡಿತು. ಈ ದಿನವನ್ನು ‘ವಿಶ್ವ ಕನ್ನಡ ಸಿನಿಮಾ ದಿನ’ವೆಂದು ಘೋಷಣೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಬೆಂಗಳೂರು ಚಲನಚಿತ್ರೋತ್ಸವ ನಂಬರ್ ಒನ್ ಆಗುವಂತೆ ಮಾಡಬೇಕು. ಸಾಮಾಜಿಕ ಸಂದೇಶ ಇರುವಂಥ ಸಿನಿಮಾಗಳನ್ನು ಮಾಡಬೇಕು. ಕಪ್ಪುಬಿಳುಪು ಸಿನಿಮಾಗಳಲ್ಲಿ ಸೃಜನಾತ್ಮಕತೆ ಅಪಾರ. ಇತ್ತೀಚೆಗೆ ಸ್ಪೆಷಲ್ ಎಫೆಕ್ಟ್ ತೋರಿಸಲು ಕಪ್ಪುಬಿಳುಪು ಬಳಸಲಾಗುತ್ತೆ. ಸಿನಿಮಾದವರು ಚಿತ್ರೋತ್ಸವ ನೋಡಬೇಕು ಎಂದು ಮನವಿ ಮಾಡಿದರು.

ಖ್ಯಾತ ನಟ ದಿ.ಪುನೀತ್ ರಾಜ್ಕುಮಾರ್ ಅವರನ್ನು ಈ ವೇಳೆ ಬೊಮ್ಮಾಯಿ ಅವರು ನೆನಪಿಸಿಕೊಂಡರು. ಪುನೀತ್ ಅವರು ಸಮಾಜಕ್ಕೆ ಮತ್ತು ಸಿನಿಮಾರಂಗಕ್ಕೆ ಕೊಟ್ಟ ಕೊಡುಗೆ ಎಂದು ಶಾಶ್ವತವಾಗಿ ಉಳಿಯುತ್ತವೆ.

ಪುನೀತ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನಿಡಲು ನಿರ್ಧರಿಸಿದ್ದೇವೆ. ಶೀಘ್ರದಲ್ಲೇ ಸಮಾರಂಭದ ದಿನಾಂಕ ಪ್ರಕಟಿಸಲಾಗುವುದು. ಮೈಸೂರಿನಲ್ಲಿ ಚಿತ್ರನಗರಿ ಮಾಡಲು ಮುಂದಿನ ವರ್ಚ ಅಗತ್ಯ ಕ್ರಮ ಕೈಗೊಳ್ಳಲಾಗುತ್ತೆ ಎಂದು ಸೂಚಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ