ಡ್ರೈವಿಂಗ್ ಲೈಸೆನ್ಸ್ ಪಡೆಯೋಕು ಕೊರೊನಾ ಭೀತಿ

ಶುಕ್ರವಾರ, 20 ಮಾರ್ಚ್ 2020 (19:52 IST)
ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳಲು ಇದೀಗ ಕೊರೊನಾ ಭೀತಿ ಎದುರಾಗಿದೆ.

ಸಾರಿಗೆ ಇಲಾಖೆಯ ಕಚೇರಿಗಳಿಗೆ ಪ್ರತಿ ದಿನ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಬೇರೆ ಬೇರೆ ಕೆಲಸಗಳಿಗಾಗಿ ಬರುತ್ತಿದ್ದು ಅವರುಗಳಿಂದ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು   ಸುತ್ತೋಲೆ ಹೊರಡಿಸಿದ್ದಾರೆ.

 ಸುತ್ತೋಲೆ ರೀತ್ಯ ಸಾರಿಗೆ ಕಚೇರಿಗೆ ಬರುವ  ಸಾರ್ವಜನಿಕರು  ಗುಂಪು ಕಟ್ಟಿ ನಿಲ್ಲುವುದನ್ನು ಪ್ರತಿಬಂಧಿಸಲಾಗಿದೆ.  ಕಲಿಕಾ ಮತ್ತು ಚಾಲನಾ ಲೈಸನ್ಸ್ ಪಡೆಯಲು ಬರುವ ಅಭ್ಯರ್ಥಿಗಳು ನಿಗದಿತ ಸಮಯ ಪಡೆದು ಬರಲು ತಿಳಿಸಲಾಗಿದೆ.  ಅಭ್ಯರ್ಥಿಗಳು ಪರೀಕ್ಷೆ ನೀಡುವ ಮುನ್ನ ಮತ್ತು ನಂತರ ಅವರ ಕೈಗಳನ್ನು ಸ್ಯಾನಿಟೈಸರ್‌ನಿಂದ ಸ್ವಚ್ಛಪಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. 

ಕಲಿಕಾ ತರಬೇತಿ ಬಳಸುವ ಕೊಠಡಿ ಪರೀಕ್ಷೆ ಆರಂಭಿಸುವ ಮುನ್ನ ಸ್ವಚ್ಛಗೊಳಿಸುವುದು (          funnigation      )  ಹಾಗೂ ಚಾಲನಾ ಪರೀಕ್ಷೆ  ನೀಡಲು ಒಂದೇ ವಾಹನವನ್ನು ಹಲವು ಮಂದಿ ಬಳಸುವುದಾದರೆ ವಾಹನವನ್ನು ಸೂಕ್ತ ರೀತಿಯಲ್ಲಿ ಸ್ವಚ್ಛಗೊಳಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಗದಗ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ