ಡ್ರಗ್ ಮಾಫಿಯಾ : ಸಿನಿಮಾ ತಾರೆಯರನ್ನೂ ಬಿಡೋದಿಲ್ಲ ಎಂದ ಬಿಜೆಪಿ ಅಧ್ಯಕ್ಷ

ಶುಕ್ರವಾರ, 28 ಆಗಸ್ಟ್ 2020 (23:16 IST)
ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿರುವ ಡ್ರಗ್ ಮಾಫಿಯಾ ಇದೀಗ ಸ್ಯಾಂಡಲ್ ವುಡ್ ನಲ್ಲಿಯೂ ಕಿಚ್ಚೆಬ್ಬಿಸಿದೆ.

ಈ ನಡುವೆ ಡ್ರಗ್ ಮಾಫಿಯಾದಲ್ಲಿ ಸಿನಿಮಾ ತಾರೆಯರೇ ಇರಲಿ, ಬೇರೆ ಯಾರೇ ಇರಲಿ ಅವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಈ ಹಿಂದಿನ ಸರಕಾರ ಆಡಳಿತದಲ್ಲಿದ್ದಾಗ ಡ್ರಗ್ ತಡೆಗಾಗಿ ನಾವು ಹೋರಾಟ ಮಾಡಿದ್ದೆವು. ಇದೀಗ ರಾಜ್ಯ ಸರಕಾರವು ಡ್ರಗ್ ದಂಧೆಯಲ್ಲಿ ಇರೋರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ