ಮಗಳು ಹುಟ್ಟಿದ ಬೆನ್ನಲ್ಲೇ ಜಾಕ್ ಪಾಟ್ ಹೊಡೆದ ‘ರಮಣ’ ಸ್ಕಂದ ಅಶೋಕ್

ಶುಕ್ರವಾರ, 28 ಆಗಸ್ಟ್ 2020 (11:21 IST)
ಬೆಂಗಳೂರು: ರಾಧಾ ರಮಣ ಧಾರವಾಹಿ ಖ್ಯಾತಿಯ ನಟ ಸ್ಕಂದ ಅಶೋಕ್ ಈಗ ವೈಯಕ್ತಿಕ ಮತ್ತು ವೃತ್ತಿ ಬದುಕಿನಲ್ಲಿ ಅತ್ಯಂತ ಖುಷಿಯ ದಿನಗಳನ್ನು ಕಳೆಯುತ್ತಿದ್ದಾರೆ. ವೈಯಕ್ತಿಕ ಜೀವನದಲ್ಲಿ ಮಗಳು ಹುಟ್ಟಿದ ಖುಷಿಯಲ್ಲಿದ್ದರೆ, ವೃತ್ತಿರಂಗದಲ್ಲಿ ಅದ್ಭುತ ಅವಕಾಶಗಳನ್ನು ತನ್ನದಾಗಿಸಿಕೊಂಡಿದ್ದಾರೆ.


ರಾಧಾ ರಮಣ ಬಳಿಕ ಸ್ಕಂದ ಯಾವುದೇ ಧಾರವಾಹಿಯಲ್ಲಿ ನಟಿಸಿರಲಿಲ್ಲ. ಇದೀಗ ಸ್ಟಾರ್ ಸುವರ್ಣ ವಾಹಿನಿಯ ‘ಸರಸು’ ಧಾರವಾಹಿ ಮೂಲಕ ಕಿರುತೆರೆಗೆ ವಾಪಸಾಗುತ್ತಿದ್ದಾರೆ.

ಅದರ ಜತೆಗೇ ಸ್ಯಾಂಡಲ್ ವುಡ್ ನಲ್ಲೂ ಅದ್ಭುತ ಅವಕಾಶವೊಂದನ್ನು ಗಿಟ್ಟಿಸಿಕೊಂಡಿದ್ದಾರೆ. ದಿನೇಶ್ ಬಾಬು ನಿರ್ದೇಶನದ ಇನ್ನೂ ಹೆಸರಿಡಿದ ಸಿನಿಮಾವೊಂದಕ್ಕೆ ನಾಯಕರಾಗಿ ಆಯ್ಕೆಯಾಗಿದ್ದಾರೆ. ಈ ಸಿನಿಮಾದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ಶ್ರುತಿ ಪ್ರಕಾಶ್ ನಾಯಕಿಯಾಗಿದ್ದಾರೆ. ಹೀಗಾಗಿ ಕಿರುತೆರೆ-ಹಿರಿತೆರೆಯಲ್ಲಿ ಒಟ್ಟಿಗೇ ಕಾಣಿಸಿಕೊಳ್ಳಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ