ಕುಡಿದ ಅಮಲಿನಲ್ಲಿ ಯುವತಿಯರ ರಂಪಾಟ...

ಸೋಮವಾರ, 25 ಜುಲೈ 2022 (14:30 IST)
ಉತ್ತರ ಪ್ರದೇಶದ ಅನ್‌ಪ್ಲಗ್ಡ್ ಕೆಫೆಯ ಹೊರಗೆ ಮದ್ಯದ ಅಮಲಿನಲ್ಲಿ ಇಬ್ಬರು ಯುವತಿಯರು ತಡರಾತ್ರಿ ವ್ಯಕ್ತಿಯೊಬ್ಬನನ್ನು ಥಳಿಸಿದ ಘಟನೆ ನಡೆದಿದೆ.
ಕಟ್ಟಡದ 15ನೇ ಮಹಡಿಯಲ್ಲಿರುವ ಪಬ್‌ನ ಹೊರಗೆ ಯುವತಿ ಮತ್ತು ಪುರುಷನೊಬ್ಬ ಪರಸ್ಪರ ಹೊಡೆದಾಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.
ಪ್ರತ್ಯಕ್ಷದರ್ಶಿಗಳು ತಮ್ಮ ಮೊಬೈಲ್‌ನಲ್ಲಿ ಗಲಾಟೆಯನ್ನು ರೆಕಾರ್ಡ್ ಮಾಡಿದ್ದು, ಆ ಯುವತಿ ವ್ಯಕ್ತಿಯನ್ನು ಥಳಿಸುತ್ತಿರುವುದನ್ನು ಕಾಣಬಹುದಾಗಿದೆ.
ಪಬ್‌ನ ಪ್ರವೇಶ ದ್ವಾರದಲ್ಲಿ ಇರಿಸಲಾಗಿದ್ದ ಹೂವಿನ ಕುಂಡದಿಂದಲೂ ಆಕೆ ವ್ಯಕ್ತಿ ಮೇಲೆ ಹಲ್ಲೆ ನಡೆಸಿದಳು.
ಕೆಲಕಾಲ ಮಾತಿನ ಚಕಮಕಿ ಮುಂದುವರಿದಿದ್ದು, ಅದನ್ನು ಬೌನ್ಸರ್‌ಗಳು ಮತ್ತು ಪಬ್‌ನ ಇತರ ನಿರ್ವಾಹಕರು ತಡೆದಿದ್ದಾರೆ.
ಇಬ್ಬರು ಯುವತಿಯರನ್ನು ಪೊಲೀಸರು ಬಂಧಿಸಿದ್ದಾರೆ.....

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ