ಮಾಗಡಿ ರಸ್ತೆಯ ಅಂಜನಾ ನಗರದ ಸ್ಫೂರ್ತಿಧಾಮದಲ್ಲಿ ಇಂದು ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಜರುಗಿದೆ. ವೇದಿಕೆಯ ಆಗಮಿಸಿರುವ ಪಾನಮತ್ತ ವ್ಯಕ್ತಿಯೊಬ್ಬ ಪದೇ ಪದೇ ವೇದಿಕೆಯ ಮುಂಬಾಗಕ್ಕೆ ತೆರಳಿ ಸಚಿವರಿಗೆ ಕೈಮುಗಿಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ನೀಡಲು ಮಂದಾಗಿದ್ದಾನೆ. ಪಾನಮತ್ತ ವ್ಯಕ್ತಿಯ ಕಾಟ ತಾಳಲಾರದೇ ವೇದಿಕೆಯಲ್ಲಿದ್ದ ಮುಖಂಡರು ಪತ್ರವನ್ನು ತೆಗೆದುಕೊಂಡು ಮುಖ್ಯಮಂತ್ರಿಯವರಿಗೆ ನೀಡಿದ್ದಾರೆ.
ತನ್ನ ಮನವಿ ಪತ್ರವನ್ನು ನೀಡಿದ ಬಳಿಕವು ಸುಮ್ಮನಾಗದ ಪಾನಮತ್ತ ವ್ಯಕ್ತಿ, ಮತ್ತೆ ಮತ್ತೆ ವೇದಿಕೆಯ ಬಳಿ ತೆರಳಿ ಸಚಿವರುಗಳಿಗೆ ಕೈಮುಗಿಯಲು ಮುಂದಾಗಿ ಅಸಭ್ಯವರ್ತನೆ ತೋರಿದ್ದಾನೆ. ಕುಡುಕ ಮಹಾಶಯನ ವರ್ತನೆಗೆ ಬೇಸತ್ತ ಪೊಲೀಸರು, ಇತನನ್ನು ಹೊರಗೆಳೆದು ತಂದಿದ್ದಾರೆ.
ಪಾನಮತ್ತ ವ್ಯಕ್ತಿ ನೀಡಿದ ಪತ್ರದ ವಿವರ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬ ಚನ್ನಾಗಿರಬೇಕು ಎಂದು ಆಶಿಸುತ್ತೇನೆ. ಇವರಿಗೆ ದೇವರು ಆರೋಗ್ಯ ಆಯುಷ್ಯ ಕಲ್ಪಿಸಲಿ. ಮುಖ್ಯಮಂತ್ರಿಯವರು ನೂರು ವರ್ಷಗಳ ಕಾಲ ಚನ್ನಾಗಿರಬೇಕೆಂದು ಬೇಡಿಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಅವರನ್ನು ಹಾಡಿ ಹೊಗಳಿ ಪಾನಮತ್ತ ವ್ಯಕ್ತಿ ಪತ್ರ ಬರೆದಿದ್ದ ಎಂದು ವೇದಿಕೆಯಲ್ಲಿದ್ದ ಮುಖಂಡರು ತಿಳಿಸಿದ್ದಾರೆ.