ದುನಿಯಾ ವಿಜಯ್ ಗೆ ಜೈಲಾ? ಬೇಲಾ? ಇಂದು ನಿರ್ಧಾರ

ಬುಧವಾರ, 26 ಸೆಪ್ಟಂಬರ್ 2018 (09:44 IST)
ಬೆಂಗಳೂರು: ಮಾರುತಿ ಗೌಡ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಮತ್ತು ನಾಲ್ವರು ಸಹಚರರ ಸಲ್ಲಿಸಿದ್ದ ಜಾಮೀನು ಅರ್ಜಿಯ ಭವಿಷ್ಯ ಇಂದು ನಿರ್ಧಾರವಾಗಲಿದೆ.

ನಗರದ 8 ನೇ ಎಂಎಂಸಿ ನ್ಯಾಯಾಲಯ ವಿಜಯ್ ಮತ್ತು ನಾಲ್ವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಪೂರ್ತಿಗೊಳಿಸಿದ್ದು, ಇಂದು ತೀರ್ಪು ಕಾಯ್ದಿರಿಸಿದೆ. ಹೀಗಾಗಿ ದುನಿಯಾ ವಿಜಿ ಮತ್ತು ಗ್ಯಾಂಗ್ ನ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಸದ್ಯಕ್ಕೆ ಪರಪ್ಪನ ಅಗ್ರಹಾರದಲ್ಲಿ ಕಳೆದ ಮೂರು ದಿನಗಳಿಂದ ಸಾಮಾನ್ಯ ಖೈದಿಗಳ ವಿಭಾಗದಲ್ಲಿ ನ್ಯಾಯಾಂಗ ಬಂಧನ ಅನುಭವಿಸುತ್ತಿರುವ ವಿಜಯ್ ಗೆ ಇಂದು ಮಹತ್ವದ ದಿನವಾಗಲಿದೆ. ಇನ್ನೊಂದೆ ವಾಣಿಜ್ಯ ಮಂಡಳಿ ಕೂಡಾ ಅವರ ವಿರುದ್ಧ ಕ್ರಮ ಕೈಗೊಳ್ಳಲು ಚಿಂತನೆ ನಡೆಸುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ