ದುನಿಯಾ ವಿಜಯ್ ಜೈಲಿಗೆ ಹೋಗಲು ಈಕೆಯೇ ಕಾರಣವಂತೆ!

ಸೋಮವಾರ, 24 ಸೆಪ್ಟಂಬರ್ 2018 (14:42 IST)
ಬೆಂಗಳೂರು : ಜಿಮ್ ಟ್ರೈನರ್ ಮೇಲೆ ಹಲ್ಲೆ ಮಾಡಿ ನ್ಯಾಯಾಂಗ ಬಂಧನದಲ್ಲಿರುವ ದುನಿಯಾ ವಿಜಯ್ ಜೈಲಿಗೆ ಹೋಗಲು ಕಾರಣ ಯಾರು ಎಂಬ ವಿಚಾರವನ್ನು  ಇದೀಗ ವಿಜಯ್ ಅವರ  ಮೊದಲ ಪತ್ನಿ ನಾಗರತ್ನ ಅವರು ಹೇಳಿದ್ದಾರೆ.


ನಟ ವಿಜಯ್ ಅವರು ಈಗಾಗಲೇ ತಮ್ಮ ಮೊದಲ ಪತ್ನಿ ನಾಗರತ್ನಾ ಅವರಿಗೆ ವಿಚ್ಛೇದನ ನೀಡಿ  ನಟಿ ಕೀರ್ತಿ ಅವರನ್ನು ಎರಡನೇ ಮದುವೆಯಾಗಿದ್ದಾರೆ. ಇದೀಗ ನಟ ವಿಜಯ್ ಈ ರೀತಿಯಾಗಲು ಅವರ ಎರಡನೇ ಪತ್ನಿ ಕೀರ್ತಿ ಅವರೇ ಕಾರಣ ಎಂದು ಮೊದಲ ಪತ್ನಿ ನಾಗರತ್ನ ಆರೋಪಿಸಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯ್ ನಡೆದು ಬಂದ ಹಾದಿ ಮರೆತಿದ್ದಾರೆ. ಅವರು ದುಡ್ಡಿಗಾಗಿ ಬಂದವಳ ಜೊತೆ ಇದ್ದಾರೆ. ಅವಳು ಸ್ವಲ್ಪ ದಿನ ಇರ್ತಾಳೆ, ಆಮೇಲೆ ಹೋಗುತ್ತಾಲೆ. ನನ್ನ ಗಂಡ ಜೈಲಿಗೆ ಹೋಗಲು ಕೀರ್ತಿಗೌಡ ಕಾರಣ ಎಂದು ದುನಿಯಾ ವಿಜಯ್ ಪತ್ನಿ ನಾಗರತ್ನ ಕೀರ್ತಿಗೌಡ ಮೇಲೆ ಆರೋಪ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ