ಮೆರವಣಿಗೆ ವೇಳೆ ಮದರಸಾಗೆ ನುಗ್ಗಿ ಪೂಜೆ!
ಪ್ರತಿ ವರ್ಷ ನವರಾತ್ರಿಯ ಮೆರವಣಿಗೆ ವೇಳೆ ಮೊಹಮ್ಮದ್ ಗವಾನ್ ಮದರಸಾದ ಹೊರಗಡೆ ಹಿಂದೂ ಸಮುದಾಯದವರು ದೇವಿಗೆ ಪೂಜೆ ಮಾಡುತ್ತಿದ್ದರು. ಆದರೆ ಈ ಬಾರಿ ನೇರವಾಗಿ ಮದರಸಾಕ್ಕೆ ನುಗ್ಗಿ, ಜೈ ಭವಾನಿ, ವಂದೇ ಮಾತರಂ, ಹಿಂದೂ ಧರ್ಮಕೀ ಜೈ ಎಂದು ಘೋಷಣೆ ಕೂಗಿ ಪೂಜೆ ಮಾಡಿದ್ದಾರೆ.
ಘಟನೆಯ ಬಗ್ಗೆ ಮೊಹಮ್ಮದ್ ಶಫಿಯುದ್ದೀನ್ ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮದರಸಾದ ಬೀಗ ಮುರಿದು, ಸೆಕ್ಯೂರಿಟಿ ಮೇಲೆ ಹಲ್ಲೆಗೆ ಯತ್ನ ಮಾಡಿ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸಿದ್ದಾರೆ ಎಂದು ದೂರು ನೀಡಿದ್ದಾರೆ.