ಮೈಸೂರಿನಲ್ಲಿ ಸಂಭ್ರಮದ ದಸರಾ: ಮಾವುತರು, ಕಾವಾಡಿಗರ ಕುಟುಂಬದವರಿಗೆ ಶೋಭಾ ಉಪಾಹಾರ ಕೂಟ

Sampriya

ಶುಕ್ರವಾರ, 11 ಅಕ್ಟೋಬರ್ 2024 (14:07 IST)
Photo Courtesy X
ಮೈಸೂರು: ಇಲ್ಲಿನ ಅರಮನೆ ಆವರಣದಲ್ಲಿ ಗಜಪಡೆಯ ಮಾವುತರು, ಕಾವಾಡಿಗಳು ಹಾಗೂ ಕುಟುಂಬದವರಿಗೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೆ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಶುಕ್ರವಾರ ಉಪಾಹಾರ ಕೂಟ ಆಯೋಜಿಸಿದರು.

ಹೋಳಿಗೆ- ತುಪ್ಪದ ಜೊತೆ ಉಪಾಹಾರವನ್ನು ಶೋಭಾ ಕರಂದ್ಲಾಜೆ ಬಡಿಸಿದರು. ಶಾಸಕ ಟಿ.ಎಸ್. ಶ್ರೀವತ್ಸ,‌ ಆರ್‌ಎಸ್‌ಸ್ ಮುಖಂಡ ಮಾ. ವೆಂಕಟರಾಮ್, ಮಾಜಿ ಸಂಸದ ಪ್ರತಾಪ ಸಿಂಹ,‌ ಬಿಜೆಪಿ ಮುಖಂಡರಾದ ಮೈ.ವಿ ರವಿಶಂಕರ್, ಮಂಜುನಾಥ್, ಎಂ .ಸತೀಶ್, ಶಿವಕುಮಾರ್, ಸಿದ್ದರಾಜು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಶೋಭಾ ಅವರು ಮೈಸೂರು ‌ಜಿಲ್ಲಾ ಉಸ್ತುವಾರಿ ಸಚಿವೆ ಆಗಿದ್ದಾಗ ಮಾವುತರಿಗೆ ಉಪಾಹಾರದ ವ್ಯವಸ್ಥೆ ಮಾಡುತ್ತಿದ್ದರು. ಅದನ್ನು ನಂತರವೂ ದಸರಾ ಸಂದರ್ಭದಲ್ಲಿ ಆಯುಧಪೂಜೆಯ ದಿನದಂದು ಮುಂದುವರಿಸಿಕೊಂಡು ಬರುತ್ತಿದ್ದಾರೆ.

ಇದೇ ವೇಳೆ ಶೋಭಾ ಅವರು, ದುಷ್ಟ ಶಕ್ತಿಗಳ ಎದುರು ಸತ್ಯದ ಜಯ ಎಂಬ ಪತ್ರಿಕಾ ಜಾಹಿರಾತು ವಿಚಾರವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದಾರೆ.

ದುಷ್ಟ ಶಕ್ತಿಗಳು ಯಾರು ಎಂಬುದನ್ನು ಸರ್ಕಾರ ತೀರ್ಮಾನ ಮಾಡಲ್ಲ. ಜನರು ತೀರ್ಮಾನ ಮಾಡುತ್ತಾರೆ. ಯಾರು ಸರ್ಕಾರದ ಹಣ, ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ? ಯಾರು ಭಷ್ಟಾಚಾರವನ್ನೇ ಉದ್ಯಮ ಮಾಡಿಕೊಂಡಿದ್ದಾರೆ? ವರ್ಗಾವಣೆಗೂ ದುಡ್ಡು, ಕೆಲಸ ಕೊಡಿಸಲಿಕ್ಕೂ ದುಡ್ಡು. ಎಲ್ಲದರಲ್ಲೂ ದುಡ್ಡು ತೆಗೆದುಕೊಳ್ಳುತ್ತಾರೆ. ಅಂತವರು ಯಾವ ದೃಷ್ಟರ ಬಗ್ಗೆ ಮಾತನಾಡುತ್ತಾರೆ ಅವರಿಗೆ ಅವರೇ ಪ್ರಶ್ನೆ ಹಾಕಿಕೊಳ್ಳಬೇಕು. ಇಂತಹ ಜಾಹೀರಾತಿಗೆ ಸರ್ಕಾರದ ಹಣ ಬಳಕೆ ಮಾಡಿಕೊಂಡು ಅವರ ಮುಖಕ್ಕೆ ಅವರೇ ಮಸಿ ಬಳಿದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ' ಎಂದರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ