ದಸರ ವಿಶೇಷ: ಅರಸೀಕೆರೆ- ಮೈಸೂರು ಪ್ರಯಾಣಿಸುವವರಿಗೆ ರೈಲ್ವೆ ಇಲಾಖೆಯಿಂದ ಗುಡ್‌ನ್ಯೂಸ್‌

Sampriya

ಬುಧವಾರ, 9 ಅಕ್ಟೋಬರ್ 2024 (14:53 IST)
Photo Courtesy X
ಬೆಂಗಳೂರು: ವಿಶ್ವಾವಿಖ್ಯಾತ ನಾಡಹಬ್ಬ ದಸರಾ ಹಿನ್ನೆಲೆ ಅರಸೀಕೆರೆ-ಮೈಸೂರು ನಡುವೆ ಮೂರು ದಿನ ಮೂರುಟ್ರಿಪ್ ಡೆಮು ರೈಲುಗಳನ್ನು ಓಡಿಸಲು ನೈರುತ್ಯ ರೈಲ್ವೆ ನಿರ್ಧಾರ ಕೈಗೊಂಡಿದೆ.

ಅಕ್ಟೋಬರ್ 10, 11 ಮತ್ತು 12 ರಂದು ಅರಸೀಕೆರೆ  ಮತ್ತು ಮೈಸೂರು  ನಿಲ್ದಾಣಗಳ ನಡುವೆ ಎರಡೂ ದಿಕ್ಕುಗಳಲ್ಲಿ ಮೂರು ಟ್ರಿಪ್ ಡೆಮು ವಿಶೇಷ ರೈಲು ಓಡಾಟ ನಡೆಸಲಿದೆ.

ರೈಲು ಸಂಖ್ಯೆ 06207 ಅರಸೀಕೆರೆ-ಮೈಸೂರು ಡೆಮು ವಿಶೇಷ ರೈಲು ಅರಸೀಕೆರೆಯಿಂದ ಮಧ್ಯಾಹ್ನ 2:30ಕ್ಕೆ ಹೊರಟು, ಅದೇ ದಿನ ಸಂಜೆ 6:40ಕ್ಕೆ ಮೈಸೂರು ತಲುಪಲಿದೆ. ರೈಲು ಸಂಖ್ಯೆ 06208 ಮೈಸೂರು-ಅರಸೀಕೆರೆ ಡೆಮು ವಿಶೇಷ ರೈಲು ಮೈಸೂರಿನಿಂದ ಸಂಜೆ 6:50ಕ್ಕೆ ಹೊರಟು ಅದೇ ದಿನ ರಾತ್ರಿ 11:43ಕ್ಕೆ ಅರಸೀಕೆರೆ ತಲುಪಲಿದೆ.

ಹಬ್ಬನಘಟ್ಟ, ಬಾಗೇಶಪುರ, ಹಾಸನ, ಮಾವಿನಕೆರೆ, ಹೊಳೆ ನರಸೀಪುರ, ಅನ್ನೇಚಾಕನಹಳ್ಳಿ ಹಾಲ್ಟ್, ಶ್ರವಣೂರು ಹಾಲ್ಟ್, ಮಂದಗೆರೆ, ಬಿರಹಳ್ಳಿ ಹಾಲ್ಟ್, ಅಕ್ಕಿಹೆಬ್ಬಾಳು, ಹೊಸ ಅಗ್ರಹಾರ, ಅರ್ಜುನಹಳ್ಳಿ ಹಾಲ್ಟ್, ಹಂಪಾಪುರ, ಕೃಷ್ಣರಾಜನಗರ, ಡೋರನಹಳ್ಳಿ, ಸಾಗರಕಟ್ಟೆ, ಕಲ್ಲೂರು ಎಡಹಳ್ಳಿ ಹಾಲ್ಟ್, ಕೃಷ್ಣರಾಜಸಾಗರ, ಮತ್ತು ಬೆಳಗುಳ ನಿಲ್ದಾಣಗಳಲ್ಲಿ ರೈಲು ನಿಲುಗಡೆಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ