ಈಗ್ಲೇ ಹಾಪ್ ಕಾಮ್ಸ್ ಶುರು ಮಾಡಿ ಎಂದ ಸಚಿವ

ಬುಧವಾರ, 8 ಏಪ್ರಿಲ್ 2020 (19:33 IST)
ಹಾಪ್ ಕಾಮ್ಸ್ ಅಂಗಡಿಗಳನ್ನು ಆರಂಭಿಸಲು ತೋಟಗಾರಿಕೆ ಅಧಿಕಾರಿಗಳಿಗೆ ಸಚಿವರೊಬ್ಬರು ಸೂಚನೆ ಕೊಟ್ಟಿದ್ದಾರೆ.

ಕೃಷಿ ಸಚಿವ ಬಿ.ಸಿ.ಪಾಟೀಲ್ ರಾಯಚೂರು ಜಿಲ್ಲೆಯಲ್ಲಿ ಇತ್ತೀಚೆಗೆ ಆಲಿಕಲ್ಲು ಮಳೆಯಿಂದ‌ಹಾನಿಯಾದ ಭತ್ತದ ಬೆಳೆಗೆ  ಸರ್ವೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅಲ್ಲದೇ ರಾಯಚೂರಿನಲ್ಲಿ ಹಾಪ್ ಕಾಮ್ಸ್ ಅಂಗಡಿಗಳನ್ನು ಆರಂಭಿಸಲು ತೋಟಗಾರಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕೃಷಿ ಚಟುವಟಿಕೆಗಳಿಗೆ ನಿರ್ಬಂಧವಿಲ್ಲ ಎಂದು ಸರ್ಕಾರ ಸ್ಪಷ್ಟ ‌ನಿರ್ದೇಶನ ನೀಡಿದೆ. ರಸಗೊಬ್ಬರ, ಕೃಷಿ ಉತ್ಪನ್ನಗಳ ಸಾಗಣಿಕೆಗೆ ಪೊಲೀಸ್ ಇಲಾಖೆ ತೊಂದರೆ ಕೊಡಬಾರದು. ಕೃಷಿ ಉಪಕರಣಗಳ ಅಂಗಡಿಗಳು ತೆರೆಯಲು‌ ಈಗಾಗಲೇ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಲಾಗಿದೆ.

ರಸಗೊಬ್ಬರ ಅಭಾವ ಆಗದಂತೆ‌ ಕ್ರಮವಹಿಸಲಾಗಿದೆ. ನಕಲಿ, ಕಳಪೆ ಬೀಜ ಮಾರಾಟದ ಬಗ್ಗೆ ವಿಜಿಲೈನ್ಸ್ ಮೂಲಕ ಪರಿಶೀಲನೆ ಮಾಡಲಾಗುತ್ತದೆ. ಕಳಪೆ ಬೀಜ ಮಾರಾಟಗಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿ ಸ್ಪಷ್ಟಪಡಿಸಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ