ರಾಜ್ಯದ ಈ ಜಿಲ್ಲೆಯು ಕೊರೊನಾ ಮುಕ್ತವಾಗುವತ್ತ ಇಟ್ಟಿದೆ ಹೆಜ್ಜೆ
ಕೊರೊನಾ ವೈರಸ್ ಮುಕ್ತ ಜಿಲ್ಲೆಯಾಗುವತ್ತ ರಾಜ್ಯದ ಈ ಜಿಲ್ಲೆಯು ಹೆಜ್ಜೆ ಇಟ್ಟಿದ್ದು ಜನತೆಯಲ್ಲಿ ಖುಷಿ ತರುತ್ತಿದೆ.
ಈ ನಡುವೆ ಕಳೆದ 24 ಗಂಟೆಗಳ ಅವಧಿಯಲ್ಲಿ ಲಾಕ್ ಡೌನ್ ಉಲ್ಲಂಘಿಸಿದ 489 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಲಾಕ್ ಡೌನ್ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಜಿಲ್ಲಾಡಳಿತದಿಂದ ಅಗತ್ಯ ಸೇವೆಗಳ ಪಾಸ್ ಪಡೆದವರನ್ನು ಹೊರತು ಪಡಿಸಿ ಬೇರಾವುದೇ ವಾಹನಗಳ ಸಂಚಾರಕ್ಕೆ ಅನುಮತಿ ನೀಡುವುದಿಲ್ಲ ಎಂದು ಹನುಮಂತರಾಯ ತಿಳಿಸಿದ್ದಾರೆ.