ನೇಪಾಳದಲ್ಲಿ ಭೂಕಂಪ; 6 ಸಾವು

ಬುಧವಾರ, 9 ನವೆಂಬರ್ 2022 (17:05 IST)
ನೇಪಾಳದ ದೋಟಿ ಜಿಲ್ಲೆಯಲ್ಲಿ ಬುಧವಾರ ನಸುಕಿನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಹಲವು ಮನೆಗಳು ಕುಸಿದಿವೆ. ನೇಪಾಳದಲ್ಲಿ ಪ್ರಬಲ ಭೂಕಂಪಕ್ಕೆ 6 ಮಂದಿ ಸಾವನಪ್ಪಿದ್ದಾರೆ. ನೇಪಾಳದ ಭೂಕಂಪದ ಉತ್ತರಕಂಪನಗಳು ದೆಹಲಿ, ನೋಯ್ಡಾ ಸೇರಿದಂತೆ ಹಲವೆಡೆ ಜನರ ಅನುಭವಕ್ಕೆ ಬಂದಿವೆ. ಭೂಕಂಪದಿಂದ ಆಘಾತಕ್ಕೊಳಗಾದ ಜನರು ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ. ಸುಮಾರು 10 ಸೆಕೆಂಡ್​ಗಳ ಕಾಲ ಭೂಕಂಪದ ಅನುಭವವಾಯಿತು ಎಂದು ವರದಿಯಾಗಿದೆ. ನೇಪಾಳದಲ್ಲಿ ಮಂಗಳವಾರ ರಾತ್ರಿ 8.52ಕ್ಕೆ ಮೊದಲ ಬಾರಿಗೆ ಭೂಮಿಯು ಕಂಪಿಸಿದ ಅನುಭವವಾಯಿತು. ಮೊದಲ ಭೂಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 4.9 ಎಂದು ದಾಖಲಾಗಿತ್ತು. ಬುಧವಾರ ನಸುಕಿನ 1.57ಕ್ಕೆ ಎರಡನೇ ಬಾರಿಗೆ ಭೂಮಿಯು ಕಂಪಿಸಿತು. ಇದರ ತೀವ್ರತೆಯು 6.3ರಷ್ಟು ಇತ್ತು. ನೇಪಾಳದ ಎರಡನೇ ಭೂಕಂಪನದ ಅಲೆಗಳು ಭಾರತದ ದೆಹಲಿ, ಗಾಜಿಯಾಬಾದ್, ನೋಯ್ಡಾ, ಗುರುಗ್ರಾಮ ಮತ್ತು ಲಖನೌ ನಗರಗಳನ್ನೂ ನಡುಗಿಸಿದವು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ