ಸಿಸೋಡಿಯಾಗೆ ED ವಿಚಾರಣೆ

ಬುಧವಾರ, 8 ಮಾರ್ಚ್ 2023 (13:23 IST)
ಲಿಕ್ಕರ್ ಗೇಟ್​ ಪ್ರಕರಣದಲ್ಲಿ ಜೈಲುವಾಸಿಯಾಗಿರುವ ದೆಹಲಿಯ ಮಾಜಿDCM ಸಿಎಂ ಮನೀಶ್ ಸಿಸೋಡಿಯಾಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ED ಅಧಿಕಾರಿಗಳು ಇಂದು ತಿಹಾರ್ ಜೈಲಿಗೆ ಭೇಟಿ ನೀಡಲಿದ್ದು ಸಿಸೋಡಿಯಾರನ್ನು ವಿಚಾರಣೆ ನಡೆಸಲಿದ್ದಾರೆ. ಲಿಕ್ಕರ್ ಗೇಟ್ ಪ್ರಕರಣದಲ್ಲಿಈಗಾಗಲೇ ಸಿಬಿಐ ವಿಚಾರಣೆ ಎದುರಿಸಿ 3 ದಿನಗಳ ಕಾಲ ಕಸ್ಟಡಿಯಲ್ಲಿದ್ದ ಸಿಸೋಡಿಯಾ ಇದೀಗ 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ.
 
ಸಿಸೋಡಿಯಾ ಬಂಧನಕ್ಕೆ ಈಗಾಗಲೇ AAP ಕಾರ್ಯಕರ್ತರು ಆಕ್ರೋಶಗೊಂಡಿದ್ದು, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಕೇಂದ್ರ ಸರ್ಕಾರ ತನಿಖಾ ಏಜೆನ್ಸಿಗಳನ್ನು ದುರುಪಯೋಗ ಮಾಡಿಕೊಳ್ತಿದೆ ಎಂದು ಪ್ರತಿಪಕ್ಷಗಳು ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವುದನ್ನು ಇಲ್ಲಿ ಸ್ಮರಿಸಬಹುದು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ