ಪಿಯು ಪರೀಕ್ಷಾ ಪ್ರಶ್ನೆ ಪತ್ರಿಕೆ ಮಾದರಿ ಬದಲಿಸಲು ಹೊರಟ ಶಿಕ್ಷಣ ಇಲಾಖೆ
ಪಿಯು ಪರೀಕ್ಷಾ ಪ್ರಶ್ನೆ ಪತ್ರಿಕೆ ಮಾದರಿ ಬದಲಿಸಲು ಹೊರಟ ಶಿಕ್ಷಣ ಇಲಾಖೆ ಪ್ರತಿ ವಿಷಯದ ಪ್ರಶ್ನೆ ಪತ್ರಿಕೆಯಲ್ಲೂ 15ರಿಂದ 20 ಅಂಕಗಳ ಬಹು ಆಯ್ಕೆ ಪ್ರಶ್ನೆಗಳನ್ನು ಅಳವಡಿಸಲು ಚಿಂತನೆ ನಡೆಸುತ್ತಿದೆ. ಅಷ್ಟೇ ಅಲ್ಲ ಹೀಗೆ ಮಾಡುವುದರಿಂದಾಗಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸಹ ತುಂಬಾ ಅನುಕೂಲವಾಗುತ್ತದೆ. ಮಕ್ಕಳು ಇನ್ನಷ್ಟು ನಿಖರ ಉತ್ತರಗಳನ್ನು ನೀಡುವಲ್ಲಿ ಸಿದ್ಧರಾಗುತ್ತಾರೆ ಎಂಬ ಅಂಶವನ್ನು ಪ್ರಸ್ಥಾಪ ಮಾಡಿದ್ದರು ಎಂದು ತಿಳಿದು ಬಂದಿದೆ. ಈಗೆಲ್ಲಾ ಪದವಿ ಕಾಲೇಜುಗಳ ಪ್ರವೇಶಕ್ಕೆ ಪಿಯುಸಿ ಫಲಿತಾಂಶವೇ ಮುಖ್ಯವಾಗಿರುತ್ತದೆ. ಆದ್ದರಿಂದ ಮಕ್ಕಳು ಹೆಚ್ಚಿನ ಅಂಕ ಗಳಿಸುವುದು ಮುಖ್ಯವಾಗುತ್ತದೆ. ಆದ್ರೆ ಇತ್ತಿಚಿನ ದಿನಗಳಲ್ಲಿ ಉನ್ನತ ಶಿಕ್ಷಣದಲ್ಲಿ ದಾಖಲಾತಿ ಕಡಿಮೆಯಾಗುತ್ತಿದೆ. ಅದರಲ್ಲೂ ಕರ್ನಾಟಕದ ಶೈಕ್ಷಣಿಕ ಪ್ರಗತಿ ಕುಂಠಿತವಾಗಿರುವುದು ತಿಳಿದುಬರುತ್ತಿದೆ. ಇದನ್ನು ಹೀಗೆ ಬಿಟ್ಟರೆ ಈ ವರ್ಷವೂ ಸಹ ಅದೇ ಪರಿಸ್ಥಿತಿ ಮರುಕಳಿಸಲಿದೆ ಆದ ಕಾರಣ ಕೆಲವೊಂದು ಬೆಳವಣಿಗೆ ಆಗಲೇ ಬೇಕು ಎಂದು ಈ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ.