ಆನ್ ಲೈನ್ ಶಿಕ್ಷಣ ಕ್ರಮಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗರಂ

ಶನಿವಾರ, 16 ಮೇ 2020 (10:52 IST)
ಬೆಂಗಳೂರು : ಆನ್ ಲೈನ್ ಶಿಕ್ಷಣ ಮಾಡುವ ಕ್ರಮಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗರಂ ಆಗಿದ್ದಾರೆ.


ಲಾಕ್ ಡೌನ್ ಇರುವ ಕಾರಣ ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡದ ಹಿನ್ನಲೆಯಲ್ಲಿ  ಅನೇಕ ಶಾಲೆಗಳಲ್ಲಿ  ಆನ್ ಲೈನ್ ಶಿಕ್ಷಣ ಮಾಡಲು ಶಾಲಾ ಆಡಳಿತ ಮಂಡಳಿ ನಿರ್ಧಾರ  ಮಾಡಿದೆ . ಇದಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗರಂ ಆಗಿದ್ದಾರೆ.


ಆನ್ ಲೈನ್ ಪಾಠ ಮಾಡಿದ್ರೆ ಹುಷಾರ್. LKG, UKG ಗೆ ಆನ್ ಲೈನ್ ಪಾಠ ಬೇಡ. ಪುಟ್ಟ ಮಕ್ಕಳಿಗೆ ಆನ್ ಲೈನ್ ಕ್ಲಾಸ್ ಬೇಡ. ಅವರಿಗೆಲ್ಲಾ  ಶಿಕ್ಷಣ ಇಲಾಖೆಯಿಂದ ಖಡಕ್ ಕ್ರಮ ಕಾದಿದೆ ಎಂದು ಕಿಂಡರ್ ಗಾರ್ಟನ್ ಶಾಲೆಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಾರ್ನಿಂಗ್  ನೀಡಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ