ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ತಮ್ಮನನ್ನೆ ಕೊಂದ ಅಣ್ಣ

ಶುಕ್ರವಾರ, 27 ಸೆಪ್ಟಂಬರ್ 2019 (11:14 IST)
ಮಂಡ್ಯ : ತನ್ನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ತಮ್ಮನನ್ನು ಅಣ್ಣನೇ ಬರ್ಬರವಾಗಿ ಕೊಲೆ ಮಾಡಿದ ಘಟನೆ ಗುರುವಾರ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ನಡೆದಿದೆ.



ಮಹೇಂದ್ರ (40) ಕೊಲೆಯಾದ ತಮ್ಮ, ಮಂಜುನಾಥ್ ಕೊಲೆ ಮಾಡಿದ ಅಣ್ಣ. ಮಂಜುನಾಥ್​ ಪತ್ನಿ ಜೊತೆ ಮಹೇಂದ್ರ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ವಿಚಾರಕ್ಕೆ ಹಲವು ಬಾರಿ ಇಬ್ಬರ ನಡುವೆ ಜಗಳ ನಡೆದಿತ್ತು. ಆದರೆ ಗುರುವಾರ ಈ ಜಗಳ ವಿಕೋಪಕ್ಕೇರಿ ರಾತ್ರಿ ಮಹೇಂದ್ರ ಮಲಗಿದ್ದಾಗ ಮಾರಕಾಸ್ತ್ರ ಬಳಸಿ ಮಂಜುನಾಥ್​ ಅನೇಕ ಬಾರಿ ಇರಿದಿದ್ದು, ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.


ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಅಣ್ಣನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ