ಬೈ ಎಲೆಕ್ಷನ್ ಮುನ್ನ ಇಬ್ಬರ ಸಾವು : ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಮಾಡಿದ್ದೇನು?
ರಾಜ್ಯದ ಉಪ ಚುನಾವಣೆಗೂ ಮುನ್ನವೇ ಆ ಕ್ಷೇತ್ರದಲ್ಲಿ ಇಬ್ಬರು ಪ್ರತ್ಯೇಕ ಘಟನೆಗಳಲ್ಲಿ ಸಾವನ್ನಪ್ಪಿದ್ದು, ಬಿಜೆಪಿ ಅಭ್ಯರ್ಥಿಯು ಮೃತರ ಕುಟುಂಬಗಳಿಗೆ ಭೇಟಿ ನೀಡಿದ್ದಾರೆ.
ಚೌಡಸಮುದ್ರ ಗ್ರಾಮದಲ್ಲಿ ಹುಲ್ಲು ಕೊಯ್ಯಲು ಜಮೀನಿಗೆ ಹೋಗಿದ್ದ ಮಹದೇವಪ್ಪ(45)ಅವರಿಗೆ ಹಾವು ಕಡಿದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಸಾಸಲು ಪಕ್ಕದ ಯಲಾದಹಳ್ಳಿ ಗ್ರಾಮದ ಮಂಜುನಾಥ್ (40) ಅವರು ತಮ್ಮ ಜಮೀನಿನ ಬಳಿ ಹೋಗಿದ್ದಾಗ ಹಾವು ಕಡಿದು ಚನ್ನರಾಯಪಟ್ಟಣದ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಬಿಜೆಪಿ ಅಭ್ಯರ್ಥಿ ನಾರಾಯಣಗೌಡರಿಂದ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲಾಗಿದೆ.