ಎಲೆಕ್ಷನ್ ಟೈಮ್: ಶಾಂತಿ ಕದಡಿದ್ರೆ ಹುಷಾರ್

ಬುಧವಾರ, 17 ಏಪ್ರಿಲ್ 2019 (15:33 IST)
ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ಅಹಿತಕರ ಘಟನೆ ನೆಡೆಯದಂತೆ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರೂಟ್ ಮಾರ್ಚ್ ನಡೆಸಲಾಯಿತು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಪಟ್ಟಣದಲ್ಲಿ ಚುನಾವಣೆ ವೇಳೆ ಯಾವುದೇ ಅಹಿತಕರ ಘಟನೆ ನೆಡೆಯದಂತೆ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಬೆಂ.ಗ್ರಾ. ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ನಿವಾಸ್ ಸಪಟ್ ನೇತೃತ್ವದಲ್ಲಿ ರೂಟ್ ಮಾರ್ಚ್ ನಡೆಸಲಾಯಿತು. 

90 ಜನ ಸಿಐಎಸ್ಎಫ್ ಸಿಬ್ಬಂದಿ, ನೆಲಮಂಗಲ ಉಪವಿಭಾಗದ 500 ಪೊಲೀಸ್ ಸಿಬ್ಬಂದಿ, 2 ಕೆಎಸ್ಆರ್ಪಿ ತುಕಡಿ, 5 ಜನ ಇನ್ಸ್ ಪೆಕ್ಟರ್ ಗಳು, 7 ಜನ ಸಬ್ ಇನ್ಸ್ ಪೆಕ್ಟರ್ಗಳು ಸೇರಿದಂತೆ 2 ಪ್ರೊಬೆಶನರಿ ಡಿವೈಎಸ್ಪಿಗಳು ಇದ್ದರು.  ನೆಲಮಂಗಲದ ಅಂಬೇಡ್ಕರ್ ಕ್ರೀಡಾಂಗಣದಿಂದ ಪ್ರಾರಂಭಿಸಿ ಪಟ್ಟಣದ ಪ್ರಮುಖ ಬಿ.ಎಚ್.ರಸ್ತೆ, ಸುಭಾಷ್ ನಗರ, ವಿಜಯನಗರ, ಸಂತೆ ಬೀದಿ, ಇಂದಿರಾನಗರ, ಸದಾಶಿವನಗರ ರಸ್ತೆಗಳಲ್ಲಿ ಭರ್ಜರಿಯಾಗಿ ರೂಟ್ ಮಾರ್ಚ್ ಮಾಡಿದ್ರು.

ಭಾರತೀಯ ಸೈನಿಕರು ರೂಟ್ ಮಾರ್ಚ್ ಮಾಡುವ ವೇಳೆ  ಕೆಲವು ಬಿಜೆಪಿ ಕಾರ್ಯಕರ್ತರು ಸೈನಿಕರಿಗೆ ಪುಷ್ಪಮಾಲೆ ಹಾಕಿ ಸ್ವಾಗತಿಸಿದ್ರೆ, ಮಕ್ಕಳು  ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ