ಚುನಾವಣಾ ನೀತಿ ಸಂಹಿತೆ ಜಾರಿ ನಂತರ ಅಧಿಕಾರಿಗಳು ವಶಕ್ಕೆ ಪಡೆದ ನಗದು ಮತ್ತು ವಸ್ತುಗಳು ಮೌಲ್ಯ ನೂರು ಕೋಟಿ ರೂ. ದಾಟಿದೆ. ಮಾರ್ಚ್ 29 ರಿಂದ ಏಪ್ರಿಲ್ 10 ವರೆಗೆ ಚುನಾವಣಾಧಿಕಾರಿಗಳು ನಡೆಸಿರುವ ಕಾರ್ಯಚರಣೆಯಲ್ಲಿ 27 ಕೋಟಿ 38 ಲಕ್ಷ ರೂ. ವೆಚ್ಚದ ನಗದು ವಶಕ್ಕೆ ಪಡೆಯಲಾಗಿದೆ ಮತ್ತು 26.38 ಕೋಟಿ ರೂ. ಮೌಲ್ಯದ 4 ಲಕ್ಷದ 25 ಸಾವಿರ ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. 87 ಲಕ್ಷ 89 ಸಾವಿರ ಮೌಲ್ಯದ 151 ಕೆ.ಜಿ ಮಾದಕ ವಸ್ತು, 9 ಕೋಟಿ 87 ಲಕ್ತ ರೂ. ಮೌಲ್ಯದ 25 ಕೆ.ಜಿ. ಚಿನ್ನ 32 ಲಕ್ಷ ರೂ. ಮೌಲ್ಯದ 155 ಕೆ.ಜಿ ಬೆಳ್ಳಿ ಹಾಗೂ ಕುಕ್ಕಲ್, ಸೀರೆ ಸೇರಿದಂತೆ 12 ಕೋಟಿ 85 ಲಕ್ಷ ರೂ. ಮೌಲ್ಯದ ವಸ್ತುಗಳು ಸೀಜ್ ಮಾಡಲಾಗಿದೆ. ಚುನಾವಣಾ ಅಧಿಸೂಚನೆ ಜಾರಿಯಾಗುವ ಮುನ್ನವೆ ರಾಜ್ಯದಲ್ಲಿ ಭರ್ಜರಿ ಬೇಟೆ ನಡೆಯುತ್ತಿದ್ದೆ .