ಸರ್ಕಾರ ಬಜೆಟ್ ನಲ್ಲಿ ನೀಡಿದ್ದ ಅನುದಾನದಲ್ಲಿ 535 BS6 ಡೀಸೆಲ್ ಬಸ್ ಖರೀದಿ ಮಾಡಲಾಗಿದೆ. ಈಗಾಗಲೇ 40 ಎಲೆಕ್ಟ್ರಿಕ್, 150 BS6 ಡೀಸೆಲ್ ಬಸ್ಸುಗಳು ಬಿಎಂಟಿಸಿ ಸಂಸ್ಥೆ ಸೇರಿವೆ. ಫೆಬ್ರವರಿ ವೇಳೆಗೆ ಉಳಿದ ಎಲ್ಲಾ ಹೊಸ ಬಸ್ಸುಗಳು ತನ್ನ ಸಂಚಾರ ಆರಂಭಿಸಲಿವೆ.
90 ಎಲೆಕ್ಟ್ರಿಕ್ ಹಾಗೂ 265 ಬಿಎಸ್ 6 ಬಸ್ ಇಂದಿನಿಂದ ಕಾರ್ಯಾರಂಭ ಮಾಡಲಿವೆ. ಒಂದೂವರೆ ಗಂಟೆ ಜಾರ್ಜ್ ಮಾಡಿದರೆ 180 ಕಿ.ಮೀ. ಓಡಾಟ ನಡೆಸಲಿವೆ. ಧ್ವನಿವರ್ದಕ, ಸಿಸಿಟಿವಿ ಬಸ್ ವ್ಯವಸ್ಥೆ ಇದೆ. ಸಂಚಾರ ಸಮಸ್ಯೆಗೆ ಕಡಿವಾಣ ಹಾಕಲು ಮಿನಿ ಬಸ್ ವ್ಯವಸ್ಥೆ ಮಾಡಲಾಗಿದೆ. ಮೆಟ್ರೋ ಫೀಡರ್ ಸೇರಿದಂತೆ ಬೇರೆಡೆಯೂ ಬಸ್ ಸಂಚಾರ ಮಾಡಲಿದೆ. ಕೆಂಗೇರಿ, ಯಶವಂತಪುರ, ಕೆ ಆರ್ ಪುರಂ ಘಟಕದಲ್ಲಿ ಬಸ್ ಕಾರ್ಯಾಚರಣೆ ಇರುತ್ತದೆ. ಪರಿಸರ ಮಾಲಿನ್ಯ ರಹಿತ ಎಲೆಕ್ಟ್ರಿಕ್ ಬಸ್ ಇದಾಗಿದೆ.