ಗಜರಾಜನ ಎಂಟ್ರಿಗೆ ರೈತರು ಫುಲ್ ಸುಸ್ತು ...!!!

ಶುಕ್ರವಾರ, 22 ಜುಲೈ 2022 (19:59 IST)
ಚನ್ನಪಟ್ಟಣ ತಾಲ್ಲೂಕಿನಲ್ಲಿ ಹಲವು ದಿನಗಳಿಂದ ರೈತರ ಕೃಷಿ ಜಮೀನಿನ ಮೇಲೆ ಕಾಡಾನೆಗಳು ದಾಳಿ ನಡೆಸುತ್ತಿದ್ದು ಇಂದು ಒಂಟಿ ಸಲಗ ಒಂದು ಗ್ರಾಮಸ್ಥರ ಮೇಲೆ ದಾಳಿಗೆ ಮುಂದಾಗಿರುವ ಘಟನೆ ನಡೆದಿದೆ.
 
ತಾಲೂಕಿನ ದೊಡ್ಡನಹಳ್ಳಿ ಹಾಗೂ ಮಲ್ಲಂಗೆರೆ ಗ್ರಾಮದಂಚಿನ ತೋಟದ ಬಳಿ ಕಾಣಿಸಿಕೊಂಡ ಒಂಟಿ ಸಲಗ ನೋಡಲು ಗ್ರಾಮಸ್ಥರು ಜಮಾಣಗೊಂಡಿದ್ದು ಈ ವೇಳೆ ಒಂಟಿ ಸಲಗ ರಸ್ತೆ ಬಳಿ ಜಮಾವಣೆಗೊಂಡಿದ್ದ ಗ್ರಾಮಸ್ಥರನ್ನು ಅಟ್ಟಾಡಿಸಿರುವ ಘಟನೆ ನಡೆದಿದ್ದು ಗ್ರಾಮಸ್ಥರು ಒಂಟಿ ಸಲಗ ದಾಳಿಯಿಂದ ಕೂದಲೆ ಅಂತರದಿಂದ ಪಾರಾಗಿದ್ದಾರೆ.
 
ಗ್ರಾಮದ ಬಳಿ ಕಾಣಿಸಿಕೊಂಡ ಒಂಟಿ ಸಲಗವನ್ನು ಗ್ರಾಮಸ್ಥರು ಎಲ್ಲರೂ ಸೇರಿ ಕಾಡಿಗಟ್ಟುವ ಪ್ರಯತ್ನದ ವೇಳೆ ಒಂಟಿ ಸಲಗ ಏಕಾಏಕಿ ಗ್ರಾಮಸ್ಥರ ಮೇಲೆ ದಾಳಿ ಮಾಡಲು ಮುಂದಾಗಿದ್ದು ಒಂಟಿ ಸಲಗ ದಾಳಿಯಿಂದ ಭಯ ಬೀತರಾದ ಗ್ರಾಮಸ್ಥರು ಭಯ ಬಿತರಾಗಿ ಓಡಿ ಪ್ರಾಣ ಉಳಿಸಿಕೊಂಡಿರುವ ಘಟನೆ ನಡೆದಿದೆ.
 
ಗ್ರಾಮದ ಸಮೀಪವೇ ಕಾಡಾನೆ ಪ್ರತ್ಯಕ್ಷ ಗೊಂಡಿರುವ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ತಿಳಿಸಿದರು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ