ಕಾವೇರಿ ಪ್ರತಿಮೆ ಸ್ಥಾಪನೆಗೆ ಆರಂಭದಲ್ಲೇ ವಿಘ್ನ

ಶನಿವಾರ, 17 ನವೆಂಬರ್ 2018 (11:14 IST)
ಬೆಂಗಳೂರು: ಕೆಆರ್ ಎಸ್ ನಲ್ಲಿ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಕಾವೇರಿ ಪ್ರತಿಮೆ ನಿರ್ಮಾಣ ಮಾಡುವ ಕರ್ನಾಟಕದ ಸಮ್ಮಿಶ್ರ ಸರ್ಕಾರದ ಕನಸಿಗೆ ಆರಂಭದಲ್ಲೇ ವಿಘ್ನ ಎದುರಾಗಿದೆ.

ಮೈಸೂರಿನ ತಜ್ಞ ಇಂಜಿನಿಯರ್ ಗಳು ಈ ಪ್ರತಿಮೆ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ವಿಶ್ವೇಶ್ವರಯ್ಯ ಕಟ್ಟಿಸಿದ ಕೆಆರ್ ಎಸ್ ಗೆ ಹಾನಿ ಉಂಟುಮಾಡುವ ಪ್ರಯತ್ನ. ಇದು ಕೆಆರ್ ಎಸ್ ನ ಬುಡಕ್ಕೇ ಕೊಡಲಿಯೇಟು ಕೊಡುವ ಕೆಲಸ ಎಂದು ತಜ್ಞರ ಅಭಿಪ್ರಾಯ.

ಕೆಆರ್ ಎಸ್ ಸುತ್ತಮುತ್ತ ಡ್ಯಾಮ್ ಗೆ ಹಾನಿಯಾಗಬಹುದು ಎಂದು ಗಣಿಗಾರಿಕೆಗೇ ನಿಷೇಧ ಹೇರಲಾಗಿದೆ. ಹೀಗಿರುವಾಗ ಡ್ಯಾಮ್ ನಲ್ಲಿ ಪ್ರತಿಮೆ ಸ್ಥಾಪನೆ ಮಾಡಲು ನೆಲ ಕೊರೆದರೆ ತೊಂದರೆ ತಪ್ಪಿದ್ದಲ್ಲ. ಇದು ಅಪಾಯಕಾರಿ ಯೋಜನೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ