ಕನಕಪುರದಲ್ಲಿ ಅಶೋಕ್ ಸ್ಪರ್ಧಿಸಿದ್ರೂ ಸ್ವಾಗತ
ಕನಕಪುರದಲ್ಲಿ KPCC ಅಧ್ಯಕ್ಷ D.K ಶಿವಕುಮಾರ್ ವಿರುದ್ಧ ಸಚಿವ R. ಅಶೋಕ್ ಸ್ಪರ್ಧೆ ಮಾಡ್ತಾರೆ ಎಂಬ ವಿಚಾರ ಕುರಿತು ಡಿಕೆಶಿ ಪ್ರತಿಕ್ರಿಯಿಸಿದ್ದಾರೆ. ಚಿಕ್ಕಮಗಳೂರಿನ ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡಿದ ಬಳಿಕ ಅವರು ಮಾತನಾಡಿದ್ದು, ಸಂತೋಷ ರಾಜಕಾರಣ ಅಲ್ವಾ.? ಯಾರು ಬೇಕಾದ್ರೂ ನಿಲ್ಲಬಹುದು. ಸ್ವಾಗತ ಮಾಡ್ತೇನೆ.. ಹೋರಾಟ ಮಾಡೋಣ ಎಂದು ತಿಳಿಸಿದ್ದಾರೆ.. ಜನ ತಿರ್ಮಾನ ಮಾಡ್ತಾರೆ, ನನ್ನದೇನೂ ಅಭ್ಯಂತರ ಇಲ್ಲ ಎಂದಿದ್ದಾರೆ.. ಅವರು ಬಂದು ನಿಲ್ಲಲಿ, ಬೇರೆಯವನ್ನಾದರೂ ನಿಲ್ಲಿಸಲಿ. ರಾಜಕಾರಣದಲ್ಲಿ ಎದುರಿಸಲೇಬೇಕು.. ಹೋರಾಟ ಮಾಡ್ಲೇಬೇಕು.. BJPಯ ಆ ದೊಡ್ಡ ನಿರ್ಧಾರವನ್ನು ನಾನು ಸ್ವಾಗತಿಸ್ತೇನೆ ಎಂದಿದ್ದಾರೆ.