ಸಿಎಂ ಸಿದ್ದರಾಮಯ್ಯ ಆಪ್ತರ ವಿರುದ್ಧ ಶ್ರೀನಿವಾಸ್ ಪ್ರಸಾದ್ ಕಿಡಿ

ಶುಕ್ರವಾರ, 28 ಅಕ್ಟೋಬರ್ 2016 (18:46 IST)
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಎಡ, ಬಲ ಇರುವ ಇಬ್ಬರು ಸಚಿವರು ಒಂದು ಕಾಲದಲ್ಲಿ ಅವರನ್ನೇ ಸೋಲಿಸಲು ಮುಂದಾಗಿದ್ದರು. ಆ ಸಮಯದಲ್ಲಿ ಅವರ ರಾಜಕೀಯಕ್ಕೆ ಪುನರ್ಜನ್ಮ ನೀಡಿದ್ದು ನಾನು ಎಂದು  ಹೇಳಿದ್ದಾರೆ.
 
ಅಭಿಮಾನಿಗಳನ್ನು ಭೇಟಿ ಮಾಡಲು ಆಗಮಿಸಿದ ಸಮಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಎಚ್‌. ಮಹದೇವ್ ಸಿ.ಪ್ರಸಾದ್ ನನ್ನ ಕುರಿತು ಲಘುವಾಗಿ ಮಾತನಾಡಿದ್ದು ಸರಿಯಲ್ಲ. ಮಹದೇವ್ ಪ್ರಸಾದ್ ಏನೆಂಬುದು ರಾಜ್ಯದ ಜನತೆಗೆ ಗೊತ್ತು ಎಂದು ಟಾಂಗ್ ನೀಡಿದರು. 
 
ಮೈಸೂರಿನಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿದ್ದರಾಮಯ್ಯರನ್ನು ಸೋಲಿಸಲು, ಜೆಡಿಎಸ್ ಪರಿಷ್ಠ ದೇವೇಗೌಡರ ಸೂಚನೆಯಂತೆ ಮಹದೇವ್ ಪ್ರಸಾದ್ ಸಂಚು ರೂಪಿಸಿದ್ದು ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ಎಂದರು.  
 
ಆದರೆ, ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯರ ಎಡ, ಬಲದಲ್ಲಿ ಕಾಣಿಸಿಕೊಳ್ಳುವ ಮೂಲಕ ತಾನು ಸಿಎಂಗೆ ನಿಷ್ಠಾವಂತ ಎಂದು ಪೋಸ್ ಕೊಡುತ್ತಿದ್ದಾರೆ ಎಂದು ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಲೇವಡಿ ಮಾಡಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ