ಸುರ್ಜೇವಾಲಾ ಜತೆಗಿನ ಚರ್ಚೆ ಬಗ್ಗೆ ಬಾಹ್ಬಿಟ್ಟ ಸಚಿವ ಸತೀಶ ಜಾರಕಿಹೊಳಿ, ಹೇಳಿದ್ದೇನು

Sampriya

ಶುಕ್ರವಾರ, 18 ಜುಲೈ 2025 (17:22 IST)
ಬೆಳಗಾವಿ: ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ಸರ್ಕಾರ ಎರಡು ವರ್ಷಗಳ ಅವಧಿಯಲ್ಲಿ ಜಾರಿಗೆ ತಂದ ಕಾರ್ಯಕ್ರಮಗಳು ಹಾಗೂ ಅಭಿವೃದ್ಧಿಗೆ ಪ್ರತಿ ಶಾಸಕರಿಗೆ ನಿಗದಿಪಡಿಸಿದ ನಿಧಿ ಬಗ್ಗೆ ಚರ್ಚೆ ನಡೆದಿದೆ ಹೊರತು  ಕೆಪಿಸಿಸಿ ಹೊಸ ಅಧ್ಯಕ್ಷರ ಆಯ್ಕೆ ವಿಷಯವಾಗಿ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರನ್ನು ಆಯ್ಕೆ ಮಾಡುವ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದರು.

ಬೆಂಗಳೂರಿನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿಜಯೋತ್ಸವ ಸಂದರ್ಭ ಕಾಲ್ತುಳಿತ ಮತ್ತು ಸಾವು–ನೋವಿಗೆ ಕಾರಣವಾದ ಬಗ್ಗೆ ತನಿಖಾ ವರದಿ ಸಲ್ಲಿಕೆಯಾಗಿದೆ.  ಈ ಸಂಬಂಧ ಸರ್ಕಾರ ಅಧ್ಯಯನ ಮಾಡಿದ ಬಳಿಕ ತೀರ್ಮಾನವನ್ನು ಕೈಗೊಳ್ಳುತ್ತದೆ. 

ಈ ಕಾರ್ಯಕ್ರಮ ಆಯೋಜನೆಗೆ ಆರ್‌ಸಿಬಿ ತಂಡದವರು ಲೋಕೋಪಯೋಗಿ ಸೇರಿದಂತೆ ಯಾವುದೇ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿಲ್ಲ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ