ಅಧಿವೇಶನದಲ್ಲೇ ಮಾಜಿ – ಹಾಲಿ ಸ್ಪೀಕರ್ ನಡುವೆ ವಾಗ್ಯುದ್ಧ
ಪ್ರವಾಹ ಸಂತ್ರಸ್ಥರ ವಿಷಯವಾಗಿ ಮಾತನಾಡುತ್ತಿದ್ದ ಸಿದ್ದರಾಮಯ್ಯರ ಮಾತು ನಿಲ್ಲಿಸೋಕೆ ಮುಂದಾದ ಸ್ಪೀಕರ್ ಕ್ರಮಕ್ಕೆ ವಿಪಕ್ಷಗಳಿಂದ ಭಾರೀ ವಿರೋಧ ವ್ಯಕ್ತವಾಯಿತು.
ಈ ಗದ್ದಲದ ನಡುವೆಯೇ ಮಾತಿಗೆ ಮುಂದಾದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಹಾಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.
ಕಾಂಗ್ರೆಸ್ ಮುಖಂಡರಾಗಿರೋ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತಿಗೆ ಸ್ಪೀಕರ್ ಕಾಗೇರಿ ಪದೇ ಪದೇ ಅಡ್ಡಿಯಾಗಿ ಮಾತು ನಿಲ್ಲಿಸಿ ಅಂತ ಹೇಳೋಕೆ ಶುರುಮಾಡಿದ್ರು.
ಇದರು ಮಾಜಿ ಸ್ಪೀಕರ್ ರಮೇಶ್ ಕುಮಾರ್ ರನ್ನು ಕೆರಳಿಸಿತ್ತು. ಹೀಗಾಗಿ ನಡುವೆ ಪ್ರವೇಶಿಸಿದ್ರು ರಮೇಶ್ ಕುಮಾರ್. ಆದರೆ ಮಾಜಿ ಸ್ಪೀಕರ್ ಗೂ ಕಾಗೇರಿ ಪರೋಕ್ಷವಾಗಿ ಟಾಂಗ್ ನೀಡಿದ್ರು. ಇದರಿಂದ ಕೆಲಕಾಲ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.