ಹುಡುಗಿಯರ ಹಂತಕ ಸೈನೆಡ್ ಮೋಹನ್ ಗೆ ಮರಣದಂಡನೆ ಶಿಕ್ಷೆ

ಶುಕ್ರವಾರ, 25 ಅಕ್ಟೋಬರ್ 2019 (17:39 IST)
ರಾಜ್ಯವನ್ನೇ ತಲ್ಲಣಿಸಿದ್ದ ಯುವತಿಯರನ್ನು ಸರಣಿಯಾಗಿ ಹತ್ಯೆ ಮಾಡಿದ್ದ ಸೈನೆಡ್ ಮೋಹನ್ ಕುಮಾರ್ ಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ.

ಮಂಗಳೂರಿನ 6ನೇ ಜಿಲ್ಲಾ ಸತ್ರ ನ್ಯಾಯಾಲಯವು ಈ ತೀರ್ಪನ್ನು ಪ್ರಕಟ ಮಾಡಿದೆ.

ಯುವತಿಯರನ್ನು ಆಕರ್ಷಿಸಿ ಅವರೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ಆ ಬಳಿಕ ಸೈನೆಡ್ ನೀಡಿ ಆಭರಣಗಳನ್ನು ದೋಚಿದ್ದು, ಸೇರಿದಂತೆ ಹಲವು ಪ್ರಕರಣಗಳು ಸೈನೆಡ್ ಮೋಹನ್ ಮೇಲಿದ್ದವು.

ವಾದ – ವಿವಾದ ಹಾಗೂ ಸಾಕ್ಷಿಗಳನ್ನು ಆಧರಿಸಿ ನ್ಯಾಯಾಧೀಶರಾದ ಸಯಿದುನ್ನೀಸಾ ಅವರು 40 ಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆ ಹಾಗೂ 65ಕ್ಕೂ ಅಧಿಕ ದಾಖಲೆ ಪರಿಶೀಲಿಸಿ ತೀರ್ಪು ಪ್ರಕಟ ಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ